Mosquito Tornado in Pune: OMG! ಸೊಳ್ಳೆಗಳ ಸುಂಟರಗಾಳಿ, ಅಬ್ಬಬ್ಬ…ವೀಡಿಯೋ ಇಲ್ಲಿದೆ
Mosquito Tornado: ಮಹಾರಾಷ್ಟ್ರದ ಪುಣೆಯ ವಸತಿ ಪ್ರದೇಶಗಳಲ್ಲಿ ಸೊಳ್ಳೆಗಳ ಸುಂಟರಗಾಳಿಯ ನಡೆದಿರುವ ವಿಶಿಷ್ಟ ವಿದ್ಯಮಾನವೊಂದು ಕಂಡು ಬಂದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಭಾರಿ ಸಂಖ್ಯೆಯಲ್ಲಿ ಸೊಳ್ಳೆಗಳು ಹಿಂಡು ಹಿಂಡಾಗಿ ಆಕಾಶದಲ್ಲಿ ಹಾರಾಡುತ್ತಿರುವುದು ಕಂಡು ಬಂದಿದೆ. ಅದರ ವಿಡಿಯೋ ವೈರಲ್ ಆಗುತ್ತಿದೆ. ಜನವಸತಿ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಆರೋಗ್ಯದ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ಸ್ವಚ್ಛತೆಯಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪುಣೆಯ ಮುತಾ ನದಿಯ ಮೇಲೆ ಸೊಳ್ಳೆಗಳ ಸುಂಟರಗಾಳಿ ಕಾಣಿಸಿಕೊಂಡಿದ್ದು, ಅದರಲ್ಲಿ ಲಕ್ಷಾಂತರ ಸೊಳ್ಳೆಗಳು ಆಕಾಶದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಪುಣೆಯ ಜನವಸತಿ ಪ್ರದೇಶಗಳಾದ ಕೇಶವನಗರ, ಖಾರಾಡಿ ಮತ್ತು ಮುಂಧ್ವಾ ಮುಂತಾದೆಡೆ ಸೊಳ್ಳೆಗಳ ಸುಂಟರಗಾಳಿಯೂ ಕಾಣಿಸಿಕೊಂಡಿದೆ. ಇದನ್ನು ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜನವಸತಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಆತಂಕಕ್ಕೀಡಾಗಿದ್ದು, ತಮ್ಮ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
#WATCH | Pune, Maharashtra: Swarms of mosquitoes form tornadoes in the skies of Keshavnagar and Kharadi Gavthan areas. The menace is caused by the elevated water levels of the Mula Mutha River. pic.twitter.com/ynD0zlyyAR
— ANI (@ANI) February 11, 2024