Mangalore Accident: ಮುಕ್ಕ ಹೆದ್ದಾರಿಯಲ್ಲಿ ಭೀಕರ ಅಪಘಾತ, ಶಾಲಾ ಬಾಲಕಿ ಮೇಲೆ ಹರಿದ ಲಾರಿ, ಸ್ಥಳದಲ್ಲೇ ಸಾವು!!

Share the Article

Mangaluru: ರಸ್ತೆ ಬದಿ ತಂದೆಯ ಜೊತೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯ ಮೇಲೆ ಲಾರಿಯೊಂದು ಹರಿದ ದುರದೃಷ್ಟಕರ ಘಟನೆಯೊಂದು ನಡೆದಿದೆ. ಈ ಘಟನೆ ಸುರತ್ಕಲ್‌ ಬಳಿಯ ಮುಕ್ಕ ಹೆದ್ದಾರಿಯಲ್ಲಿ ನಡೆದಿದೆ.

ಲಾರಿಯೊಂದು ಸ್ಕೂಟರಿಗೆ ಡಿಕ್ಕಿಯಾಗಿದ್ದು, ಅಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮತ್ತು ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಶಾಲಾ ಬಾಲಕಿ ಮಾನ್ವಿ (12 ವರ್ಷ) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಉತ್ತರ ಕರ್ನಾಟಕ ಮೂಲದ ವ್ಯಕ್ತಿ ಲಾರಿ ಚಲಾಯಿಸುತ್ತಿದ್ದು, ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಮುಂದೆ ಹರಿದಿದ್ದು, ಅದು ಬಾಲಕಿಯ ಮೇಲಿನಿಂದಲೇ ಹರಿದು ಹೋಗಿದೆ.

ಮೃತ ಬಾಲಕಿ ಎನ್‌ಐಟಿಕೆ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದು, ಶಾಲೆ ಮುಗಿಸಿ ತಂದೆ ಜೊತೆ ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಸೇರಿ ಲಾರಿ ಚಾಲಕನಿಗೆ ಥಳಿಸಿದ್ದು, ಲಾರಿ ಚಾಲಕ ಕುಡಿದ ಮತ್ತಿನಲ್ಲಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಸುರತ್ಕಲ್‌ ಟ್ರಾಫಿಕ್‌ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

 

Leave A Reply