Bihar: ಹುಣಸೆ ಹಣ್ಣು ತಿನ್ನುವಾಗ ಹುಣಸೆ ಬೀಜ ನುಂಗಿ ಬಾಲಕ ದಾರುಣ ಸಾವು
Bihar News: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 10 ವರ್ಷದ ಬಾಲಕನೋರ್ವ ಹುಣ್ಣಸೆಹಣ್ಣು ತಿಂದು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಆದರ್ಶ್ ಮೂರನೇ ತರಗತಿಯ ವಿದ್ಯಾರ್ಥಿ. ಶನಿವಾರ ಹುಣಸೆ ಹಣ್ಣು ತಿನ್ನುತ್ತಿದ್ದ ವೇಳೆ ಅದರ ಬೀಜ ನುಂಗಿದ್ದು, ಪರಿಣಾಮ ಹುಣಸೆ ಬೀಜ ಗಂಟಲಲ್ಲಿ ಸಿಲುಕಿದೆ. ಉಸಿರಾಟದ ತೊಂದರೆ ಉಂಟಾದ್ದರಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಪೋಷಕರಿಗೆ ಬಾಲಕ ಉಸಿರಾಡಲು ಕಷ್ಟಪಡುವುದನ್ನು ಕಂಡು ಆತಂಕ ಉಂಟಾಗಿದ್ದು, ಕೂಡಲೇ ಅವರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮುಜಾಫರ್‌ಪುರಕ್ಕೆ ಕರೆದುಕೊಂಡು ಹೋದರಾದರೂ ಅಲ್ಲಿ ಅಲ್ಟ್ರಾಸೌಂಡ್ ನಡೆಸಿದಾಗ ಶ್ವಾಸಕೋಶದಲ್ಲಿ ಹುಣಸೆ ಬೀಜಗಳು ಕಂಡು ಬಂದಿದೆ. ಕೂಡಲೇ ಬಾಲಕ ಪ್ರಾಣ ಉಳಿಸಲು ಶಸ್ತ್ರಚಿಕಿತ್ಸೆ ಅಗತ್ಯವಿತ್ತು. ವೈದ್ಯರ ಸಲಹೆಯಂತೆ ಕುಟುಂಬಸ್ಥರು ಪಾಟ್ನಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆ ಬಾಲಕ ಮೃತ ಹೊಂದಿದ್ದಾನೆ.