Madhyapradesh : ಮದುವೆಯಾಗಿ ತಿಂಗಳಾದರೂ ರಾತ್ರಿ ಹತ್ತಿರ ಬಿಟ್ಟುಕೊಳ್ಳದ ಹೆಂಡತಿ – ವೈದ್ಯರ ಬಳಿ ಕರೆದೊಯ್ಯುತ್ತಿದ್ದಂತೆ ಬೆಚ್ಚಿ ಬಿದ್ದ ಗಂಡ !!

Share the Article

Madhyapradesh: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical contact) ಕೂಡ ಪ್ರಮುಖವಾಗುತ್ತದೆ. ಇದರಿಂದ ಎಷ್ಟೋ ಸಂಬಂಧಗಳೂ ಮುರಿದುಬಿದ್ದದ್ದು ಉಂಟು. ಅಂತೆಯೇ ಇಲ್ಲೊಂದು ಜೋಡಿಯ ಬದುಕಿನಲ್ಲಿ ಈ ಕುರಿತಂತೆ ನಡೆಯಬಾರದ್ದೊಂದು ನಡೆದು ಹೋಗಿದೆ.

ಇದನ್ನೂ ಓದಿ: Central government : ದೇಶಾದಲ್ಲಿ ಮತ್ತೆ ನೋಟು ಬದಲಾವಣೆ ?! ಹಣಕಾಸು ಸಚಿವರು ಕೊಟ್ರು ಬಿಗ್ ಅಪ್ಡೇಟ್

ಹೌದು, ಮಧ್ಯಪ್ರದೇಶದ(Madhyapradesh) ಗ್ವಾಲಿಯರ್‌ನಲ್ಲಿ ಮದುವೆಯಾಗಿ ಹೊಸ ಬದುಕು ಆರಂಭಿಸಿದ ಜೋಡಿಯ ಬಾಳಲ್ಲಿ ಯಾರೂ ಊಹಿಸಿದ ಘಟನೆಯೊಂದು ನಡೆದಿದೆ. ಅದರಲ್ಲೂ ಗಂಡನ ಬುದಕಿನಲ್ಲಿ ಬಿರುಗಾಳಿಯೇ ಎದ್ದಿದೆ. ಆತ ತಾನು ಅಂದುಕೊಂಡಿದ್ದೇ ಒಂದು ಆದರೆ, ಆಗಿದ್ದೇ ಇನ್ನೊಂದು. ಇದೆಲ್ಲಾ ಜಂಜಾಟಗಳ ನಡುವೆ ಕೊನೆಗೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ.

ಅಂದಹಾಗೆ ವ್ಯಕ್ತಿಯೊಬ್ಬ 2014ರ ಜುಲೈನಲ್ಲಿ ಮದುವೆಯಾಗಿದ್ದ. ಮದುವೆ ಆದಮೇಲೆ ಹೆಂಡತಿ ತನ್ನವಳೇ ಅಲ್ಲವೇ? ಸುಖ-ನೆಮ್ಮದಿ ಮುಖ್ಯ. ಹೀಗಾಗಿ ಪ್ರತಿದಿನ ಪತ್ನಿಯ ಜತೆಗೆ ಲೈಂಗಿಕ ಕ್ರಿಯೆಗೆ ಹವಣಿಸುತ್ತಿದ್ದ. ಆದರೆ ಹೆಂಡತಿ ಮಾತ್ರ ಗಂಡ ಹತ್ತಿರ ಬಂದ ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣ ಹೇಳಿ ರತಿಕ್ರೀಡೆಯಿಂದ ತಪ್ಪಿಸಿಕೊಳ್ಳುತ್ತಿದ್ದಳು. ಕೊನೆಗೆ ಇದರಿಂದ ರೋಸಿಹೋದ ಗಂಡ ವೈದ್ಯರನ್ನು ಸಂಪರ್ಕಿಸುತ್ತಾನೆ. ಆಗ ಸತ್ಯ ವಿಚಾರ ಕೇಳಿ ಅವನೇ ಬೆಚ್ಚಿಬೀಳುತ್ತಾನೆ.

ಹೌದು, ಹೇಗೋ ಮಾಡಿ ತನ್ನ ಹೆಂಡತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾನೆ. ಆಗ ಪರೀಕ್ಷೆ ಮಾಡಿದ ಬಳಿಕ ವೈದ್ಯರು, ನೀವು ಮದುವೆಯಾಗಿರುವುದು ಮಹಿಳೆಯನ್ನಲ್ಲ ಓರ್ವ ತೃತೀಯ ಲಿಂಗಿಯನ್ನು ಎಂದು ಹೇಳಿದ್ದನ್ನು ಕೇಳಿ ಪತಿರಾಯ ಒಂದು ಕ್ಷಣ ಬೆಚ್ಚಿಬೀಳುತ್ತಾನೆ.

ಈ ಶಾಕ್ ನಿಂದ ಹೊರಬಂದ ನಂತರ ಪತಿರಾಯ ಡಿವೋರ್ಸ್ ಪಡೆಯಲು ಮುಂದಾಗುತ್ತಾನೆ. ಆದರೆ ಹೆಂಡತಿ ಮನೆಯವರು ಜೀವನಾಂಶಕೇಳಲು ಮುಂದಾದಾಗ ವಕೀಲರೊಂದಿಗೆ ಚರ್ಚಿಸಿ, ಕೋರ್ಟ್ ಮೆಟ್ಟಿಲೇರಿ ಮದುವೆಯನ್ನೇ ರದ್ದುಮಾಡಿಸುತ್ತಾನೆ.

Leave A Reply