Isha Deol: ಡ್ರೀಮ್‌ಗರ್ಲ್‌ ಹೇಮಮಾಲಿನಿ ಮಗಳ ದಾಂಪತ್ಯದಲ್ಲಿ ಬಿರುಕು! ಇಶಾ ಬಾಳಲ್ಲಿ ಡಿವೋರ್ಸ್‌ ಬಿರುಗಾಳಿ

Share the Article

Isha Deol: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಮತ್ತು ನಟಿ ಹೇಮಮಾಲಿಯ ಮಗಳು ಇಶಾ ಡಿಯೋಲ್‌ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಇದೀಗ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ. ಹೀಗೆ ಹೇಳುವ ಮೂಲಕ ಇಶಾಡಿಯೋಲ್‌ ಮತ್ತು ಭರತ್‌ ತಖ್ತಾನಿ ತಮ್ಮ ವಿಚ್ಛೇದನವನ್ನು ಘೋಷಣೆ ಮಾಡಿದ್ದಾರೆ.

ನಿಜಕ್ಕೂ ಈ ಸುದ್ದಿ ಇಶಾ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ ಎಂದೇ ಹೇಳಬಹುದು. ಮದುವೆಯಾಗಿ 12ವರ್ಷಗಳ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದು, ಇಶಾ ಮತ್ತು ಭರತ್‌ ತಖ್ತಾನಿ ನಡುವೆ ಮನಸ್ತಾಪವಿದ್ದು, ಇಬ್ಬರೂ ಬೇರ್ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಇವರಿಬ್ಬರು ಡಿವೋರ್ಸ್‌ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಈ ಸುದ್ದಿ ನಿಜವಾಗಿದೆ.

ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ನಮಗೆ ನಮ್ಮ ಮಕ್ಕಳು ಮುಖ್ಯ. ನಾವು ಯಾವಾಗಲೂ ಅವರ ಸಂತೋಷ ಮತ್ತು ಸುಖದ ಕುರಿತು ಯೋಚನೆ ಮಾಡುತ್ತೇವೆ. ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಹೇಳಿಕೊಂಡಿದ್ದಾರೆ.

ಈ ದಂಪತಿಗಳು 29 ಜೂನ್‌ 2012 ರಂದು ಇಸ್ಕಾನ್‌ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರಿಗೆ ರಾಧ್ಯ, ಮಿರಾಯ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾಗಿ 12 ವರ್ಷಗಳ ನಂತರ ಇದೀಗ ಇವರಿಬ್ಬರು ಬೇರ್ಪಟ್ಟಿದ್ದಾರೆ.

ಹೊಸ ವರ್ಷದ ದಿನದಂದು ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭರತ್‌ ಅವರು ತಮ್ಮ ಗರ್ಲ್‌ಫ್ರೆಂಡ್‌ ಜೊತೆ ಇರೋದನ್ನು ಇಶಾ ಅವರು ನೋಡಿದ್ದು, ಅನಂತರ ಈ ಎಲ್ಲಾ ಬೆಳವಣಿಗೆಗಳು ಆಗಿದೆ ಎಂದು ವರದಿಯಾಗಿದೆ.

Leave A Reply