Congress : ಲೋಕಸಭಾ ಚುನಾವಣೆ- ಕಾಂಗ್ರೆಸ್’ನಿಂದ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !!

Share the Article

Congress : ಲೋಕಸಭಾ ಚುನಾವಣೆಯಲ್ಲೂ(Parliament election)ವಿಧಾನಸಭೆ ಚುನಾವಣೆಯಲ್ಲಿ ದೊರಕಿದ ಪ್ರತಿಷ್ಠೆಯನ್ನು ಮರಳಿ ಪಡೆಯಬೇಕೆಂದು ರಾಜ್ಯ ಕಾಂಗ್ರೆಸ್(Congress) ಹರಸಾಹಸ ಪಡುತ್ತಿದೆ. ಹೀಗಾಗಿ ಅಳೆದು, ತೂಗಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದು, 15 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಮಾತ್ರ ಫೈನಲ್ ಮಾಡುತ್ತಿದೆ. ಇದೀಗ ಈ ಪಟ್ಟಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: PM Modi: ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತಿದ ಸಂಸದ ಡಿ ಕೆ ಸುರೇಶ್- ಮುಟ್ಟಿನೋಡಿಕೊಳ್ಳುವಂತೆ ಕೌಂಟ್ರು ಕೊಟ್ಟ ಪ್ರಧಾನಿ ಮೋದಿ!!

ಹೌದು, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಚಾಣಕ್ಯ ನಡೆ ಅನುಸರಿಸಿರುವ ಕಾಂಗ್ರೆಸ್ 15 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದೆ. ಅದರ ಪಟ್ಟಿ ಇಲ್ಲಿದೆ ನೋಡಿ.

• ಕೋಲಾರ – ಕೆ.ಎಚ್.ಮುನಿಯಪ್ಪ ಚಾಮರಾಜನಗರ- ಡಾ.ಎಚ್‌.ಸಿ.ಮಹದೇವಪ್ಪ

• ಬಳ್ಳಾರಿ- ನಾಗೇಂದ್ರ 

• ಬೆಳಗಾವಿ- ಸತೀಶ್‌ ಜಾರಕಿಹೊಳಿ

• ತುಮಕೂರು- ಮುದ್ದಹನುಮೇಗೌಡ

• ಚಿತ್ರದುರ್ಗ -ಬಿ.ಎನ್. ಚಂದ್ರಪ್ಪ

• ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್ 

• ಹಾಸನ- ಶ್ರೇಯಸ್‌ ಪಟೇಲ್

• ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್ 

• ಚಿಕ್ಕೋಡಿ- ರಮೇಶ್‌ ಕತ್ತಿ

• ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್‌ ಹೆಗ್ಡೆ

• ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್‌

• ಬೀದರ್‌ -ರಾಜಶೇಖರ್‌ ಪಾಟೀಲ್‌  

• ವಿಜಾಪುರ- ರಾಜು ಅಲಗೂರು

• ರಾಯಚೂರು- ಕುಮಾರನಾಯ್ಕ್

ಅಂದಹಾಗೆ ರಾಜ್ಯ ನಾಯಕರು ಶಿಫಾರಸು ಮಾಡಿ ಹೈಕಮಾಂಡ್‌ ಕೂಡ ಬಹುತೇಕ ಒಪ್ಪಿದೆ ಎನ್ನಲಾಗಿದೆ. ಅಲ್ಲದೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನಾಲ್ಕು ಮಂದಿ ಸಚಿವರೂ ಸ್ಪರ್ಧೆಗೆ ಸಂಪೂರ್ಣ ಹಿಂದೇಟು ಹಾಕುತ್ತಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಇನ್ನೂ ಕಾಂಗ್ರೆಸ್‌ ಸೇರದ ಇಬ್ಬರ ಹೆಸರು ಅಂತಿಮ ಪಟ್ಟಿಯಲ್ಲಿದೆ.

Leave A Reply