Dr K Sudhakar : ಚಿಕ್ಕಬಳ್ಳಾಪುರ ಲೋಕಸಭೆಯಿಂದ ಡಾ. ಸುಧಾಕರ್ ಕಣಕ್ಕಿಳಿಯೋದು ಫಿಕ್ಸ್- ಆದ್ರೆ ಸ್ಪರ್ಧೆ ಬಿಜೆಪಿಯಿಂದಲ್ಲ !!
Dr K Sudhakar: ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election)ಪರಾಭಾವಗೊಂಡ ಅಭ್ಯರ್ಥಿಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂಚೂಣಿಯಲ್ಲಿದ್ದು, ತಮ್ಮ ಪಕ್ಷದ ಹಿರಿಯರಲ್ಲಿ ಲಾಭಿ ನಡೆಸುತ್ತಿದ್ದಾರೆ. ಅಂತೆಯೇ ಬಿಜೆಪಿಯ ಡಾ. ಕೆ ಸುಧಾಕರ್(Dr K Sudhakar) ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದು, ಟಿಕೆಟ್ ಗಿಟ್ಟಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಸುಧಾಕರ್ ಅವರ ಸ್ಪರ್ಧೆ ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಕೊಡುತ್ತದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ದೈವಗಳ ಹರಕೆ ಕೋಲ ನೆರವೇರಿಸಿ ಯು ಟಿ ಖಾದರ್; ಮುಸ್ಲಿಂ ಧಾರ್ಮಿಕ ಮುಖಂಡನೋರ್ವರ ಆಕ್ರೋಶದ ಪೋಸ್ಟ್!!!
ಹೌದು, ಚಿಕ್ಕಬಳ್ಳಾಪುರ(Chikkaballapura) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೀನಾಯವಾಗಿ ಸೋತು ಮನೆಯಲ್ಲಿರುವ ಡಾ. ಕೆ ಸುಧಾಕರ್ ಅವರು ಮತ್ತೆ ಅಧಿಕಾರ ಪಡೆಯಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ಜೊತೆ ಭಾರೀ ಕಸರತ್ತು ನಡೆಸಿ ಕೊನೆಗೀಗ ಬಿಜೆಪಿ ದೋಸ್ತಿ ಜೆಡಿಎಸ್(JDS) ಬಾಗಿಲು ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್ ವರಿಷ್ಠರು ಸುಧಾಕರ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.
ಈ ಕುರಿತು ಸ್ವತಃ ಸುಧಾಕರ್ ಅವರೇ ಹೇಳಿಕೆ ನೀಡಿದ್ದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಹಸಿರು ನಿಶಾನೆ ತೋರಿದ್ದು, ಕೆಲಸ ಪ್ರಾರಂಭ ಮಾಡಲು ಎಂದು ಹೇಳಿದ್ದಾರೆ.
ಅಲ್ಲದೆ ನಾನು ಸಂಸದನಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದೇನೆ. ಕೃಷಿ, ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಯುವಕರಿಗೆ ಉದ್ಯೋಗ ಕೊಡಿಸವ ಮೂಲಕ ಅಭಿವೃದ್ಧಿ ಏನು ಅಂತ ತೋರಿಸಲಿದ್ದೇನೆ ಎಂದು ಪ್ರಚಾರವನ್ನೂ ಆರಂಭಿಸಿದ್ದಾರೆ.