Dakshina Kannada: ಪಣಂಬೂರು ಬೀಚ್‌ನಲ್ಲಿ ನೈತಿಕ ಗೂಂಡಾಗಿರಿ; ಹಲ್ಲೆ ಯತ್ನ, ರಾಮಸೇನೆ ಕಾರ್ಯಕರ್ತರ ಸೆರೆ

Share the Article

Dakshina Kannada: ಮಂಗಳೂರಿನಲ್ಲಿ ಮತ್ತೆ ನೈತಿಕ ಗೂಂಡಾಗಿರಿಯ ಪ್ರಕರಣವೊಂದು ನಡೆದಿದ್ದು, ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಯುವತಿ ಮತ್ತು ಕೇರಳ ಮೂಲದ ಮುಸ್ಲಿಂ ಯುವಕನೋರ್ವ ಪಣಂಬೂರು ಬೀಚ್‌ನಲ್ಲಿ ತಿರುಗಾಡುತ್ತಿದ್ದ ಸಂದರ್ಭದಲ್ಲಿ ಹಿಂದೂ ಸಂಘಟನೆ ಯುವಕರು ಹಲ್ಲೆ ಮಾಡಲು ಯತ್ನ ಮಾಡಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Gobi Manchurian: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಸಿಗಲ್ಲ; ಕಾರಣವೇನು

ಈ ಘಟನೆ ಕುರಿತು ಬೆಂಗಳೂರಿನ ಯುವತಿ ಪಣಂಬೂರು ಠಾಣೆಗೆ ದೂರು ನೀಡಿದ್ದು, ನಾಲ್ವರು ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಟ್ವಾಳ ಪಿಲಾತಬೆಟ್ಟು ನಿವಾಸಿ ಪ್ರಶಾಂತ್‌ ಭಂಡಾರಿ (38), ಬೆಳ್ತಂಗಡಿಯ ಪುತ್ತಿಲ ನಿವಾಸಿ ಸುಧೀರ್‌ (26), ಬೆಳ್ತಂಗಡಿ ಮಚ್ಚಿನ ನಿವಾಸಿ ಕೀರ್ತನ್‌ ಪೂಜಾರಿ (20) ಬೆಳ್ತಂಗಡಿ ಕರಾಯ ನಿವಾಸಿ ಉಮೇಶ್‌ (23) ಇವರು ಬಂಧಿತರೆಂದು ವರದಿಯಾಗಿದೆ. ಇವರೆಲ್ಲ ರಾಮಸೇನೆ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದೆ.

ಯುವಕ ಯುವತಿ ಜೊತೆಗಿದ್ದ ಸಂದರ್ಭದಲ್ಲಿ ಯುವಕರು ಇವರನ್ನು ಪ್ರಶ್ನೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

Leave A Reply