SSLC ಪರೀಕ್ಷೆಗೆ ಈ ಬಾರಿ ಕೂಡಾ 50:30:20 ಸೂತ್ರ
SSLC Exam: SSLC ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ 50:30:20 ಮುಂದುವರಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ತೀರ್ಮಾನ ಮಾಡಿದೆ.
ಇದನ್ನೂ ಓದಿ: Crime News: ತಂಗಿ ಮದುವೆಗಿಟ್ಟ ಆಭರಣ ಕದ್ದ ಅಕ್ಕ; ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದ ಈಕೆ ನೀಡುವ ಕಾರಣ ಇಲ್ಲಿದೆ!!!
ಈ ವರ್ಷ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳ ಅವಕಾಶವಿದ್ದು, ಮೂರು ಪರೀಕ್ಷೆಗಳಲ್ಲಿ ಇದೇ ಮಾದರಿ ಅನುಸರಣೆಯಾಗಲಿದೆ.
ಶೇ.50 ರಷ್ಟು ಸುಲಭ, ಶೇ.30 ರಷ್ಟು ಸಾಧಾರಣ ಮತ್ತು ಶೇ. 20 ರಷ್ಟು ಕಠಿಣ ಇರಲಿದೆ. ಶೇ.30 ರಷ್ಟು ಅಂಕಗಳು ಸಾಧಾರಣ ಕಠಿಣ ಮತ್ತು ಸಾಧಾರಣ ಸುಲಭ ಎಂದು ಮತ್ತೆ ವಿಭಜೆಗೊಳ್ಳುವುದರಿಂದ ಪರೀಕ್ಷೆಯ ಕಾಠಿನ್ಯ ವ್ಯತ್ಯಾಸಗೊಳ್ಳುತ್ತದೆ ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಈ ಬಾರಿಯ ಪರೀಕ್ಷೆ ಕೋವಿಡ್ ಅವಧಿಯಲ್ಲಿ ಇದ್ದ ಹಾಗೆ ಸುಲಭವಾಗಿ ಇರಲಾರದು.