Mangaluru Politics: ಪ್ರತಿಭಾ ಕುಳಾಯಿ ಬಿಜೆಪಿಗೆ?

Share the Article

Mangaluru: ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರು ಕೈ ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಭಾ ಕುಳಾಯಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಜಾತಿ ಆಧಾರ ಮತ್ತು ಮಹಿಳಾ ಅಭ್ಯರ್ಥಿಯಾಗಿ ಮಂಗಳೂರು ಉತ್ತರದಿಂದ ಪ್ರತಿಭಾ ಟಿಕೆಟ್‌ ಪಡೆಯಲು ಪ್ರಯತ್ನ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಮಂಗಳೂರು ಉತ್ತರ ಇನಾಯತ್‌ ಅಲಿ ಅವರ ಪಾಲಾಯ್ತು.

ಪ್ರತಿಭಾ ಕುಳಾಯಿ ಅವರ ಜೊತೆ ಸ್ಥಳೀಯ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರತಿಭಾ ಅವರು ತಮ್ಮ ಮುಂದಿನ ನಡೆ ನಿರ್ಧರಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ಆದರೆ ಈ ಕುರಿತು ಪ್ರತಿಭಾ ಕುಳಾಯಿ ಅವರಿಂದ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ.

Leave A Reply