Home Karnataka State Politics Updates Gnanavapi Mosque: ಹಿಂದೂಗಳಿಗೆ ಪೂಜೆಗೆ ಅವಕಾಶ – ಜ್ಞಾನವಾಪಿ ಮಸೀದಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮುಸ್ಲಿಮರಿಂದ...

Gnanavapi Mosque: ಹಿಂದೂಗಳಿಗೆ ಪೂಜೆಗೆ ಅವಕಾಶ – ಜ್ಞಾನವಾಪಿ ಮಸೀದಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮುಸ್ಲಿಮರಿಂದ ನಮಾಜ್

Gnanavapi Mosque

Hindu neighbor gifts plot of land

Hindu neighbour gifts land to Muslim journalist

Ganavapi Mosque: ಹಿಂದೂಗಳ ಹೋರಾಟಕ್ಕೆ ಕೊನೆಗೂ ಭರ್ಜರಿ ಜಯ ಸಿಕ್ಕಿದ್ದು ವಾರಾಣಸಿಯ ಜ್ಞಾನವಾಪಿ ಮಸೀದಿಯ ವ್ಯಾಸರ ನೆಲಮಾಳಿಗೆಯಲ್ಲಿ ಪೂಜೆಗೆ ಕೋರ್ಟ್ ಅನುಮತಿ ನೀಡಿದೆ. ಅಲ್ಲದೆ ಬುಧವಾರ ರಾತ್ರಿಯಿಂದಲೇ ಪೂಜೆ ಹಾಗೂ ಆರತಿ ನಡೆಸಲಾಗಿದೆ. ಇತ್ತ ಈ ಬೆನ್ನಲ್ಲೇ ಭಾರೀ ಸಂಖ್ಯೆಯಲ್ಲಿ ಮಸೀದಿಗೆ ಆಗಮಿಸಿ ಮುಸ್ಲಿಮರು ನಮಾಜ್ ಮಾಡಿದ್ದಾರೆ.

ಇದನ್ನೂ ಓದಿ: Coconut oil: ತೆಂಗಿನೆಣ್ಣೆಯಲ್ಲಿ ಈ ಎರಡು ವಸ್ತು ಬೆರೆಸಿ ಕೂದಲಿಗೆ ಹಚ್ಚಿ! ಬಿಳಿ ಕೂದಲು ಕ್ಷಣಮಾತ್ರದಲ್ಲಿ ಮಾಯ!!!

ಹೌದು, 1993ರಿಂದಲೂ ಬೀಗ ಮುದ್ರೆ ಹಾಕಲಾಗಿದ್ದ ಈ ಮಾಳಿಗೆಯನ್ನು ಪೂಜೆಗೆ ಮುಕ್ತಗೊಳಿಸುವಂತೆ ಬುಧವಾರ ಕೋರ್ಟ್ ಆದೇಶ ನೀಡಿತ್ತು. ಅದರಂತೆ ಅಲ್ಲಿನ ಬೀಗ ತೆರವುಗೊಳಿಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಪೂಜೆ ನಡೆಸಲಾಗಿದೆ. ಶುಕ್ರವಾರ ವಾರಣಾಸಿಯ ಜ್ಞಾನವಾಪಿ ಮಸೀದಿಗೆ (Gyanvapi Mosque) ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು (Muslims) ಆಗಮಿಸಿ ನಮಾಜ್‌ (Namaz) ಮಾಡಿದ್ದಾರೆ.

ಅಂದಹಾಗೆ ಶುಕ್ರವಾರ ನಮಾಜ್‌ಗೆ ಸಾಮಾನ್ಯವಾಗಿ ಸೇರುವ ಜನರ ಸಂಖ್ಯೆಗಿಂತ ದುಪ್ಪಟ್ಟು ಜನ ಇಂದು ಆಗಮಿಸಿದ್ದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ ಬಿಗಿ ಭದ್ರತೆಯ ನಡುವೆ ಶುಕ್ರವಾರ ನಮಾಜ್ ಶಾಂತಿಯುತವಾಗಿ ನಡೆಯಿತು. ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಇತರ ಮಸೀದಿಗೆ ತೆರಳಿ ಪ್ರಾರ್ಥನೆ ಮಾಡುವಂತೆ ಸೂಚಿಸಲಾಯಿತು.