Home Entertainment Actor Darshan: ಮತ್ತೆರಡು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಪವಿತ್ರಾ ಗೌಡ!! ಈ ಫೋಟೋದಲ್ಲಿ...

Actor Darshan: ಮತ್ತೆರಡು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಪವಿತ್ರಾ ಗೌಡ!! ಈ ಫೋಟೋದಲ್ಲಿ ಏನೋ ಇದೆ….

Hindu neighbor gifts plot of land

Hindu neighbour gifts land to Muslim journalist

Pavitra Gowda: ಇತ್ತೀಚೆಗಷ್ಟೇ ಪವಿತ್ರ ಗೌಡ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ನಡುವೆ ಕೆಲವೊಂದು ವಿಷಯದಲ್ಲಿ ಬಿಸಿಬಿಸಿ ವಾದ ಉಂಟಾಗಿತ್ತು. ಇವರಿಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರು.

ಪವಿತ್ರಗೌಡ ಅವರು ದರ್ಶನ್‌ ಜೊತೆಗೆ ಆಪ್ತ ಫೋಟೋಗಳನ್ನು ಶೇರ್‌ ಮಾಡಿದ್ದು, ಇದರಿಂದ ವಿಜಯಲಕ್ಷ್ಮೀ ಅವರು ಪವಿತ್ರ ಗೌಡ ಅವರ ಮೊದಲಿನ ಗಂಡನ ಜೊತೆ ಇರುವ ಕೆಲವೊಂದು ವೀಡಿಯೋ ತುಣುಕುಗಳನ್ನು ಹಾಕಿ ತಮ್ಮ ಗಂಡನ ಜೊತೆ ಇರುವ ಫೋಟೋ ಹಾಕಿದ್ದು, ನಮ್ಮ ರಿಲೇಷನ್‌ಶಿಪ್‌ಗೆ ಹತ್ತು ವರ್ಷ ಎಂದು ಬರೆದಿರುವುದಕ್ಕೆ ಖಡಕ್‌ ಆಗಿ ಬರೆದಿದ್ದರು.

ನಂತರ ಪವಿತ್ರ ಗೌಡ ಅವರು ಕೂಡಾ ವಿಜಯಲಕ್ಷ್ಮಿ ಅವರಿಗೆ ಕೂಡಾ ಎದುರೇಟಿನ ಉತ್ತರ ನೀಡಿದ್ದರು. ಲೀಗಲ್‌ ಆಕ್ಷನ್‌ ನಿಮಗೆ ಮಾತ್ರವಲ್ಲ ನನಗೂ ಗೊತ್ತಿದೆ ಎಂಬ ಮಾತನ್ನು ಬರೆದಿದ್ದರು. ನಂತರ ಈ ವಿಷಯ ತಣ್ಣಗಾಯಿತು. ಇದೀಗ ಎಲ್ಲಾ ಕೂಲ್‌ ಆಗಿದ್ದು, ಇದೀಗ ಮತ್ತೆರಡು ಹೊಸ ಫೊಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ ಪವಿತ್ರಗೌಡ.

ಸಫಾರಿಯಲ್ಲಿ ಭಾಗವಹಿಸದ್ದ ಫೊಟೋಗಳನ್ನು ಪವಿತ್ರ ಗೌಡ ಶೇರ್‌ ಮಾಡಿದ್ದಾರೆ. ಜೊತೆಗೆ ಈ ಭೂಮಿಯು ಕಲೆ, ಛಾಯಾಗ್ರಾಹಕ ಕೇವಲ ಸಾಕ್ಷಿ ಎಂದು ಬರೆದಿದ್ದಾರೆ. ಇದಿಷ್ಟೇ ಆಗಿದ್ದರೆ ಪರ್ವಾಗಿಲ್ಲ, ಆದರೆ ನೀವು ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪವಿತ್ರ ಗೌಡ ಅವರ ಕೈಯಲ್ಲಿ ಡಿ ಎಂಬ ಅಕ್ಷರದ ಟ್ಯಾಟು ಕಂಡಿದೆ. ಇದನ್ನು ನೋಡಿದ್ದೇ ತಡ ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್‌ಗಳು ಬರುತ್ತಿದೆ.

ಇದನ್ನು ನೋಡಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರೇನಾದರೂ ರಿಯಾಕ್ಟ್‌ ಮಾಡ್ತಾರಾ? ಕಾದು ನೋಡಬೇಕು.

 

View this post on Instagram

 

A post shared by (@pavithra_gowda_7)