Belthangady: ಗೋಳಿಯಂಗಡಿ ಬಳಿ ಭೀಕರ ಸ್ಫೋಟ!!! ಹಲವರಿಗೆ ಗಂಭೀರ ಗಾಯ, ಬೆಚ್ಚಿಬಿದ್ದ ಜನತೆ!!

Share the Article

Belthangady: ವೇಣೂರು ರಸ್ತೆಯಲ್ಲಿರುವ ಗೋಳಿಯಂಗಡಿ ಸಮೀಪ ಭೀಕರ ಸ್ಫೋಟ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಸಿಡಿಮದ್ದು ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಈ ಘಟನೆಯಿಂದ ಹಲವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.

ಸ್ಫೋಟದ ತೀವ್ರತೆಗೆ ಜನ ಭಯಭೀತಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಿಡಿಮದ್ದು ತಯಾರಕ ಸ್ಥಳದಲ್ಲಿ ಸ್ಫೋಟಕ ಸಂಭವಿಸಿದ್ದು ಎಂದು ತಿಳಿದು ಬಂದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಪಟಾಕಿ ಗೋದಾಮಿನಲ್ಲಿ (Firecracker) ಸ್ಫೋಟಗೊಂಡಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

55 ವರ್ಷದ ಸ್ವಾಮಿ ಹಾಗೂ ಇನ್ನೊಬ್ಬ ಕಾರ್ಮಿಕ ದುರ್ಮರಣ ಹೊಂದಿರುವುದಾಗಿ ವರದಿಯಾಗಿದೆ. ಇನ್ನೋರ್ವ ಕಾರ್ಮಿಕ ಕೂಡಾ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಶೀರ್‌ ಎಂಬುವವರಿಗೆ ಸೇರಿದ ಸಾಲಿಡ್‌ ಫೈರ್‌ ವರ್ಕ್ಸ್‌ ಪಟಾಕಿ ಗೋದಾಮಿನಲ್ಲಿ ಅವಘಡ ನಡೆದಿದೆ.

ಸ್ಫೋಟದ ರಭಸಕ್ಕೆ ಕಾರ್ಮಿಕರು ಗೋದಾಮಿನಿಂದ ಹಾರಿ ಬಿದ್ದಿದ್ದಾರೆ ಎನ್ನಲಾಗಿದೆ. ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

Leave A Reply