Vijayapura: ಜೈಲಿನಲ್ಲಿ ರಾಮೋತ್ಸವ ಆಚರಣೆ, ಹಿಂದೂ ಕೈದಿಗಳ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮುಸ್ಲಿಂ ಅಧಿಕಾರಿಗಳ ಸಾಥ್ !!

Share the Article

Vijayapura: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಆದದ್ದು ಇಡೀ ದೇಶ ಮಾತ್ರವಲ್ಲ, ವಿಶ್ವವೇ ಸಂಭ್ರಮಿಸಿದೆ. ಈ ಸಂಭ್ರಮ ಪೂಜೆ-ಪುನಸಸ್ಕಾರಗಳೊಂದಿಗೆ ಮುಗಿಲು ಮುಟ್ಟಿದೆ. ಜೈಲಿನಲ್ಲಿರೋ ಹಿಂದೂ ಖೈದಿಗಳು ಕೂಡ ಶ್ರೀರಾಮೋತ್ಸವ ಆಚರಿಸಿ ಇದನ್ನು ಸಂಭ್ರಮಿಸಿದ್ದಾರೆ. ಆದರೆ ಹೀಗೆ ಸಂಭ್ರಮಿಸವಾಗ ಈ ಖೈದಿಗಳ ಮೇಲೆ ಅನ್ಯಕೋಮಿನ ಖೈದಿಗಳು ಹಲ್ಲೆ ನಡೆಸಿದ್ದು, ಮುಸ್ಲಿಂ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎಂಬ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Rishab Shetty: ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟ ಡಿವೈಸ್‌ ಸ್ಟಾರ್‌ ರಿಷಬ್‌ ಶೆಟ್ಟಿ! ತುಳುನಾಡ ಸಂಸ್ಕೃತಿ ಬಿಂಬಿಸಿ ಕೊಟ್ಟ ರಿಷಬ್‌!!!

ಹೌದು, ವಿಜಯಪುರದ(Vijayapura) ಕೇಂದ್ರ ಕಾರಾಗೃಹದ ದರ್ಗಾ ಜೈಲಿನಲ್ಲಿಯೂ (Vijaypura Jail) ಕೆಲ ಕೈದಿಗಳು ಜೈಲಿನೊಳಗೆ ರಾಮೋತ್ಸವ ಆಚರಣೆ ಮಾಡಿದ್ದರು. ಇದನ್ನು ಸಹಿಸದ ಕೆಲವು ಅಧಿಕಾರಿಗಳು ಮುಸ್ಲಿಂ ಖೈದಿಗಳಿಂದ ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಂದಹಾಗೆ ಜ.22ರಂದು ಪ್ರಾಣಪ್ರತಿಷ್ಠೆ ಸಮಯಕ್ಕೆ ಜೈಲಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ (ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಸೆಲ್‌ನಲ್ಲೇ ಶ್ರೀರಾಮೋತ್ಸವ ಆಚರಣೆ ಮಾಡಿದ್ದರು. ಇದರಿಂದ ಕೋಪಗೊಂಡ ಜೈಲರ್ ಕೊಲೆ ಪ್ರಕರಣದಲ್ಲಿ ಜೈಲ್‌ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಾದ ಮುಸ್ಲಿಂ ಕೈದಿಗಳನ್ನು ತನ್ನ ಕಚೇರಿಗೆ ಕರೆಸಿ ಅವರಿಂದ ಹಲ್ಲೆ ಮಾಡಿಸಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.

ಇಷ್ಟೇ ಅಲ್ಲದೆ ಈ ಹಲ್ಲೆಗೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಕುರಿತಂತೆ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಭಾರೀ ಆಕ್ರೋಶ ಕೇಳಿಬರುತ್ತಿದೆ. ಇದೀಗ ಜೈಲರ್ ವಿರುದ್ಧ ಹಿಂದೂ ಸಂಘಟನೆ ಸಿಡಿದೆದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

Leave A Reply