Jagadish shetter: ಲೋಕಸಭಾ ಚುನಾವಣೆ- ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್’ಗೆ ಕ್ಷೇತ್ರವೂ ಫಿಕ್ಸ್ !!

Share the Article

Jagadish shetter: ಈಗತಾನೆ ಬಿಜೆಪಿಗೆ ಘರ್ ವಾಪ್ಸಿ ಆಗಿರು ಜಗದೀಶ್ ಶೆಟ್ಟರ್’ಗೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದದು, ಸ್ಪರ್ಧಿಸೋ ಕ್ಷೇತ್ರ ಕೂಡ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.

ಹೌದು, ಸಿಎಂ ಜಗದೀಶ ಶೆಟ್ಟರ್(Jagadish shetter) ಮರಳಿ ಬಿಜೆಪಿ ಸೇರ್ಪಡೆಯಾಗಿರುವುದು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ. ಮಾತ್ರವಲ್ಲ, ಬೆಳಗಾವಿಗೂ ಅದು ವರದಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾಕೆಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೆಟ್ಟರ್’ಗೆ ಬೆಳಗಾವಿ(Belgavi) ಟಿಕೆಟ್ ನೀಡಲು ಪಕ್ಷವು ತೀರ್ಮಾನಿಸಿದೆ ಎಂಬ ಸುದ್ದಿಯೊಂದು ಬಂದಿದೆ.

ಸಂಸದರಾಗಿದ್ದ ಸುರೇಶ ಅಂಗಡಿ ಅವರ ಆಕಾಲಿಕ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಮಂಗಲ ಸುರೇಶ ಅಂಗಡಿ ಅವರ ಗೆಲುವಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರಮುಖ ಪಾತ್ರ ವಹಿಸಿದ್ದರು. ಮಂಗಲರ ಜನಪ್ರಿಯತೆ ಅಷ್ಟಿಲ್ಲದಿರುವದರಿಂದ ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ ಮಂಗಲ ಅಂಗಡಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಇದರಿಂದಾಗಿ ಅಂಗಡಿ ಕುಟುಂಬ ಒಪ್ಪಿಗೆ ನೀಡಿದರೆ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸೋದು ಫಿಕ್ಸ್ ಎನ್ನಲಾಗುತ್ತಿದೆ.

Leave A Reply

Your email address will not be published.