Wakf Board: ರಾಜ್ಯದ ಮದರಸಾಗಳಲ್ಲಿನ್ನು ‘ಭಗವಾನ್ ಶ್ರೀರಾಮ’ ನ ಪಾಠ ಬೋದನೆ – ವಕ್ಫ್ ಮಂಡಳಿ ಘೋಷಣೆ!!
Wakf Board: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಆದ ಬಳಿಕ ಹಲವು ಬದಲಾವಣೆಗಳು ನಡೆಯುತ್ತಿದೆ. ಶ್ರೀರಾಮನನ್ನು ವಿರೋಧಿಸುವವರೂ ಕೂಡ ರಾಮನನ್ನು ನಮ್ಮ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದು, ಭಾವನಾತ್ಮಕವಾಗಿ ಒಂದಾಗುತ್ತಿದ್ದಾರೆ. ಅಂತೆಯೇ ಇದೀಗ ಉತ್ತರಾಖಂಡ ವಕ್ಫ್ ಬೋರ್ಡ್(Uttaraknada Wakf Board) ಅಡಿಯಲ್ಲಿ ನಡೆಯುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಶ್ರೀರಾಮನ(Shree rama)ಕುರಿತಾಗಿರುವ ಕಥೆಯನ್ನು ಸೇರಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಬಂದಿದೆ.
ಹೌದು, ಉತ್ತರಾಖಂಡ್ ವಕ್ಫ್ ಮಂಡಳಿಯ ಅಡಿಯಲ್ಲಿ ನಡೆಸಲಾಗುವ ಮದರಸಾಗಳಲ್ಲಿನ ಪಠ್ಯಕ್ರಮದಲ್ಲಿ ಶ್ರೀರಾಮನ ಕಥೆಯನ್ನು ಸೇರಿಸಲಾಗುವುದು. ಮದರಸದ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ ಅವರೊಂದಿಗೆ ಶ್ರೀರಾಮನ ಜೀವನವನ್ನೂ ಕಲಿಸಲಾಗುವುದು. ಮಾರ್ಚ್ ನಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ವಕ್ಫ್ ಮಂಡಳಿಯ ಅಧ್ಯಕ್ಷ ಶದಾಬ್ ಶಮ್ಸ್ ಗುರುವಾರ ಹೇಳಿದ್ದಾರೆ.
ಮಾರ್ಚ್‌ನಿಂದ ಹೊಸ ಪಠ್ಯಕ್ರಮ ಜಾರಿ
2024ರ ಮಾರ್ಚ್‌ನಿಂದ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಉತ್ತರಾಖಂಡ ವಕ್ಸ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಹೇಳಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಶ್ರೀರಾಮನ ಬಗ್ಗೆಯೂ ಓದುತ್ತಾರೆ. ಶ್ರೀರಾಮನದು ಆದರ್ಶಪ್ರಾಯ ಜೀವನ. ಇದನ್ನು ಎಲ್ಲರೂ ತಿಳಿದುಕೊಂಡು ಅನುಕರಿಸಬೇಕು. ತಂದೆಯ ವಾಗ್ದಾನವನ್ನು ಪೂರೈಸಲು ಶ್ರೀರಾಮನು ಸಿಂಹಾಸನವನ್ನು ತೊರೆದು ಕಾಡಿಗೆ ಹೋದನು. ಶ್ರೀರಾಮನಂತಹ ಮಗನನ್ನು ಯಾರು ಬಯಸುವುದಿಲ್ಲ ಹೇಳಿ? ಎಂದರು. ಅಂದಹಾಗೆ . ವಕ್ಫ್ ಮಂಡಳಿ ಅಡಿಯಲ್ಲಿ ರಾಜ್ಯದಾದ್ಯಂತ 117 ಮದರಸಾಗಳನ್ನು ನಡೆಸಲಾಗುತ್ತಿದೆ.