Gnanavapi Masjid: ಜ್ಞಾನವಾಪಿ ಮಸೀದಿ ನಿರ್ಮಾಣ ಮೊದಲು ಅಲ್ಲಿ ಇದ್ದದ್ದೇನು ಗೊತ್ತಾ? ಅಚ್ಚರಿಯೊಂದಿಗೆ ಕುತೂಹಲ ಕೆರಳಿಸಿದ ಭಾರತೀಯ ಪುರಾತತ್ವ ಇಲಾಖೆ ವರದಿ!!

Share the Article

Gnanavapi Masjid: ಅಯೋಧ್ಯೆಯ ರಾಮ ಮಂದಿರ ಬೆನ್ನಲ್ಲೇ ಕಾಶಿ ವಿಶ್ವನಾಥ ದೇವಾಲಯ, ಮಥುರೆಯ ಕೃಷ್ಣನ ದೇವಾಲಯವೂ ನಿರ್ಮಾಣ ಆಗಬೇಕೆಂಬ ಕೂಗು ಕೇಳಿರುತ್ತಿದೆ. ಜ್ಞಾನವಾಪಿ ಮಸೀದಿ ಸರ್ವೇ ಕಾರ್ಯ ನಡೆಯುತ್ತಿದ್ದು, ಇದೀಗ ಪುರಾತತ್ವ ಇಲಾಖೆಯಿಂದ ಅಚ್ಚರಿ ಸತ್ಯವೊಂದು ಹೊರಬಿದ್ದಿದೆ.

ಇದನ್ನೂ ಓದಿ: Arun yogiraj: ‘ರಾಮನ ಮೂರ್ತಿ ಕೆತ್ತಿದ್ದು ನಾನೆ, ಆದರೆ ಮಂದಿರದೊಳಗಿರುವುದು ನಾ ಕೆತ್ತಿದ ವಿಗ್ರಹವಲ್ಲ’!! ಹೊಸ ಸತ್ಯ ಬಿಚ್ಚಿಟ್ಟ ಅರುಣ್ ಯೋಗಿರಾಜ್

ಹೌದು, ವಾರಾಣಸಿಯ ಜ್ಞಾನವಾಪಿ ಮಸೀದಿ(Gnanavapi Masjid) ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಸರ್ವೆ ವರದಿ ಬಹಿರಂಗವಾಗಿದೆ. ಎಎಸ್‌ಐ ವರದಿಯನ್ನು ಬಹಿರಂಗ ಮಾಡುವಂತೆ ಈ ಹಿಂದೆ ಕೋರ್ಟ್‌ ಆದೇಶ ನೀಡಿತ್ತು. ಅಂತೆಯೇ ಇದೀಗ ವರದಿ ಬಹಿರಂಗವಾಗಿದ್ದು ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

https://x.com/ANI/status/1750558265149395166?t=-lPVRckYjiBy6BjXrcH4sg&s=08

ಈ ಕುರಿತಾಗಿ ವಾರಾಣಸಿಯಲ್ಲಿ ಹಿಂದೂಗಳ ಪರ ವಕೀಲ ವಿಷ್ಣುಶಂಕರ್ ಜೈನ್ ಹೇಳಿಕೆ ನೀಡಿದ್ದು, ಇದು ಎಎಸ್ಐನ ನಿರ್ಣಾಯಕ ಸಂಶೋಧನೆಯಾಗಿದೆ. 17ನೇ ಶತಮಾನದಲ್ಲಿ ದೊಡ್ಡ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ದೇವನಾಗರ ಲಿಪಿ, ತೆಲುಗು, ಕನ್ನಡ ಶಾಸನಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಅಲ್ಲದೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಎಎಸ್‌ಐ ಸಮೀಕ್ಷೆಯು, ಈಗಿರುವ ರಚನೆಗಿಂತ ದೊಡ್ಡ ಪ್ರಮಾಣದ ಹಿಂದು ದೇವಾಲಯ ಅಲ್ಲಿತ್ತು ಎನ್ನುವುದನ್ನು ಸೂಚಿಸಿದೆ. ಮಸೀದಿ ನಿರ್ಮಾಣಕ್ಕೂ ಮುನ್ನ ಮಂದಿರ ಇತ್ತು. ಚಿಕ್ಕ ಮಂದಿರವಲ್ಲ. ಅಲ್ಲಿ ದೊಡ್ಡ ಭವ್ಯ ಮಂದಿರ ನಿರ್ಮಾಣವಾಗಿತ್ತು. ಹಿಂದಿನ ಕಟ್ಟಡದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯದ್ದಾಗಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದೆ ಎಂದಿದ್ದಾರೆ.

ಅಲ್ಲದೆ ಸಮೀಕ್ಷೆಯಲ್ಲಿ 32 ಸ್ಥಳಗಳಲ್ಲಿ ಪುರಾವೆಗಳು ಸಿಕ್ಕಿವೆ. ಮಸೀದಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ತೋರಿಸುತ್ತದೆ. 2 ಸೆಪ್ಟೆಂಬರ್ 1669 ರಂದು ದೇವಾಲಯವನ್ನು ಕೆಡವಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನಾರ್ದನ, ರುದ್ರ ಮತ್ತು ವಿಶ್ವೇಶ್ವರನ ಬಗ್ಗೆ ಶಾಸನಗಳು ಕಂಡುಬಂದಿವೆ ಎಂದು ಹೇಳಿದ್ದಾರೆ.

Leave A Reply