Jagadish Shettar: ಶೆಟ್ಟರ್‌ ಬಿಜೆಪಿ ಸೇರ್ಪಡೆ ಯಾಕೆ? ಆರ್.ಅಶೋಕ್‌ ರಿಂದ ಬಿಗ್‌ ಅಪ್ಡೇಟ್‌!!

Share the Article

Jagadish Shettar: ಜಗದೀಶ ಶೆಟ್ಟರ್‌ ಬಿಜೆಪಿಗೆ ಇಂದು ಮತ್ತೆ ಸೇರಿದ್ದಾರೆ. ಇದು ಅಪರೇಷನ್‌ ಕಮಲ ಅಲ್ಲ. ಕಾಂಗ್ರೆಸ್‌ ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣ ಇದ್ದು ಅದನ್ನು ತಡೆದುಕೊಳ್ಳಲಾರದೆ ಶೆಟ್ಟರ್‌ ಅವರು ಮರಳಿ ತಮ್ಮ ಗೂಡು ಸೇರಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ (R Ashok) ಹೇಳಿದ್ದಾರೆ.

ಸಂಘ ಪರಿವಾರದ ಹಿನ್ನಲೆಯಿಂದ ಜಗದೀಶ್‌ ಶೆಟ್ಟರ್‌ ಅವರು ಬಂದಿದ್ದಾರೆ. ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಸೇರಿಬಿಟ್ಟರು. ರಾಮನವಮಿಗೂ ಇಮಾಮ್‌ ಸಾಬಿಗೂ ಏನು ಸಂಬಂಧ ಎಂಬಂತೆ ಇದು ಆಗಿತ್ತು. ಹಿಂದೂಗಳ ಕಡೆಗಣನೆ, ಉಸಿರುಗಟ್ಟುವ ವಾತಾವರಣ ಅಲ್ಲಿತ್ತು. ಹಾಗಾಗಿ ಮರಳಿ ಗೂಡಿಗೆ ಬಂದಿದ್ದಾರೆ. ಅವರಿಗೆ ತುಂಬು ಹೃದಯದ ಸ್ವಾಗತ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್‌ ಅವರು ಈ ಮಾತನ್ನು ಹೇಳಿದ್ದಾರೆ.

 

Leave A Reply