Temple: ಈ ದೇವಾಲಯಕ್ಕೆ ಭೇಟಿ ನೀಡಲು ಜನ ಹೆದರುತ್ತಾರೆ?? ಅದೇಕೆ ಗೊತ್ತಾ??
Dangerous Temple: ಭಾರತ ತನ್ನ ಶ್ರೀಮಂತ ಸಂಸ್ಕೃತಿ, ಆಚರಣೆಗಳಿಂದ ಪ್ರಖ್ಯಾತಿ ಪಡೆದಿದೆ. ಅಷ್ಟೇ ಅಲ್ಲದೆ ಪುರಾತನ ಕಾಲದ ದೇವಾಲಯ, ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ಈ ಐತಿಹಾಸಿಕ ದೇವಸ್ಥಾನಗಳನ್ನು ನೋಡಲು ದೇಶದ ಒಳಗಿನವರು ಮಾತ್ರವಲ್ಲದೇ ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ. ಆದರೆ, ಇದೊಂದು ದೇವಸ್ಥಾನಕ್ಕೆ(Temple)ಹೋಗೋದಕ್ಕೆ ಜನ ಹೆದರುತ್ತಾರೆ. ಯಾಕೆ ಗೊತ್ತಾ??
ಈ ದೇವಸ್ಥಾನಕ್ಕೆ ಹೋಗಲು ಜನರು ಹೆದರುತ್ತಾರೆ. ಇದು ಅಪಾಯಕಾರಿ ದೇವಾಲಯ(Dangerous Temple)ಎನ್ನಲಾಗಿದ್ದು,ಈ ದೇವಸ್ಥಾನ ದೆಹಲಿಯಿಂದ 500 ಕಿಲೋಮೀಟರ್ ದೂರದಲ್ಲಿದೆಯಂತೆ. ನೋಡಲು ಸಣ್ಣ ಮನೆಯಂತೆ ಕಾಣುವ ಈ ದೇವಸ್ಥಾನದಲ್ಲಿ ಖಾಲಿ ಕೋಣೆಯನ್ನು ಚಿತ್ರಗುಪ್ತನ ಕೋಣೆ ಎನ್ನಲಾಗುತ್ತದೆ.
ಎಲ್ಲರ ಮನದಲ್ಲಿ ನಡುಕ ಹುಟ್ಟಿಸುವ ಈ ದೇವಸ್ಥಾನ ಹಿಮಾಚಲ ಪ್ರದೇಶದಲ್ಲಿದೆಯಂತೆ. ಇದು ಯಮರಾಜನ ದೇವಸ್ಥಾನ ಎನ್ನಲಾಗಿದ್ದು, ಇದರಿಂದಾಗಿ ಈ ದೇವಸ್ಥಾನಕ್ಕೆ ಹೋಗಲು ಜನರು ಹೆದರುತ್ತಾರೆ. ಯಮ ದೇವನಿಗಾಗಿ ನಿರ್ಮಾಣವಾಗಿರುವ ಈ ದೇವಸ್ಥಾನ ಚಂಬಾ ಜಿಲ್ಲೆಯ ಭರಮೌರ್ ಪ್ರದೇಶದಲ್ಲಿದೆ. ಅಷ್ಟೆ ಅಲ್ಲದೇ, ಸಾವನ್ನಪ್ಪಿದ ಬಳಿಕ ಮೊಟ್ಟ ಮೊದಲು ಆತ್ಮ ಈ ದೇವಸ್ಥಾನಕ್ಕೆ ಬರುತ್ತದೆ ಎಂದು ನಂಬಲಾಗಿದೆ.