Home latest Insult: ಕೇಸರಿ ಧ್ವಜಕ್ಕೆ ಅವಮಾನ ಮಾಡಿದ ಮುಸ್ಲಿಂ ವ್ಯಕ್ತಿ, ಬೆತ್ತಲೆ ಮೆರವಣಿಗೆ ವೀಡಿಯೋ ವೈರಲ್‌!!!

Insult: ಕೇಸರಿ ಧ್ವಜಕ್ಕೆ ಅವಮಾನ ಮಾಡಿದ ಮುಸ್ಲಿಂ ವ್ಯಕ್ತಿ, ಬೆತ್ತಲೆ ಮೆರವಣಿಗೆ ವೀಡಿಯೋ ವೈರಲ್‌!!!

Insult

Hindu neighbor gifts plot of land

Hindu neighbour gifts land to Muslim journalist

Insult: ಹೈದರಾಬಾದ್ ನಲ್ಲಿ ಕೇಸರಿ ಧ್ವಜವನ್ನು(Orange Flag)ಅವಮಾನ (Insult)ಮಾಡುವ ರೀತಿ ರೀಲ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ(Social Media)ಅಪ್‌ಲೋಡ್ ಮಾಡಿದ ಹಿನ್ನೆಲೆ ತೆಲಂಗಾಣದ ಸಂಗಾರೆಡ್ಡಿಯ ಮುಸ್ಲಿಂ ವ್ಯಕ್ತಿಯನ್ನು ಗುಂಪೊಂದು ಥಳಿಸಿದ್ದು ಮಾತ್ರವಲ್ಲದೇ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ವರದಿಯಾಗಿದೆ.

https://www.instagram.com/reel/C2g40wTPaid/?igsh=M2M0cmdnMDZoMTZz

ಇದನ್ನೂ ಓದಿ: Ram Navami: ಈ ವರ್ಷ ರಾಮ ನವಮಿ ಯಾವಾಗ? ಆಚರಣಾ ವಿಧಾನ ಹೇಗೆ?

ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತೆ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153(ಎ), 295-ಎ, 505(2) ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Crime News: ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಇರಿದ ಮಹಿಳೆ; ಆದರೂ ಜೈಲು ಸೇರಿಲ್ಲ, ಯಾಕೆ ಗೊತ್ತೇ?

ರೀಲ್ ನಲ್ಲಿ ಮುಸ್ಲಿಂ ವ್ಯಕ್ತಿ ಕೇಸರಿ ಧ್ವಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸಿದ್ದಲ್ಲದೆ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿರುವುದನ್ನು ಗಮನಿಸಿ ಗುಂಪೊಂದು ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಆತನಿಂದ ಜೈ ಶ್ರೀರಾಮ್ ಎಂದು ಹೇಳಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಆತನನ್ನು ಬೆತ್ತಲೆಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿ ಕೂಡ ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಐಪಿಸಿ ಸೆಕ್ಷನ್ 341, 323, 505(2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.