Sullia News: ಶಾಲೆಗೆಂದು ಹೊರಟು ನಾಪತ್ತೆಯಾಗಿದ್ದ ಬಾಲಕ ಪತ್ತೆ; ಪ್ರಕರಣ ಸುಖಾಂತ್ಯ!!

Share the Article

Sullia: ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಗೆಂದು ಹೊರಟಿದ್ದು ಅನಂತರ ನಾಪತ್ತೆಯಾದ ಘಟನೆಯೊಂದು ನಡೆದಿತ್ತು. ಲೋಕನಾಥ್‌ ಎಂಬುವವರ ಮಗ ಶ್ರೇಯಸ್‌ (15) ಎಂಬಾತನೇ ನಾಪತ್ತೆಯಾಗಿದ್ದ ವಿದ್ಯಾರ್ಥಿಯಾಗಿದ್ದು, ಇದೀಗ ಪತ್ತೆಯಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜ.23 ರಂದು ಬೆಳಿಗ್ಗೆ 7.45 ಕ್ಕೆ ಮನೆಯಿಂದ ಶಾಲೆಗೆ ಹೊರಟಿದ್ದು, ನಾಪತ್ತೆಯಾಗಿದ್ದ. ಇದೀಗ ಬಾಲಕನನ್ನು ಮಂಗಳೂರಿನ ಬಂದರು ಪೊಲೀಸರು ಪತ್ತೆ ಹಚ್ಚಿದ್ದು, ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave A Reply