Araga jnanendra: ಇವತ್ತೊಂದು ದಿನ ನನ್ನ ಜೀವವಿದ್ದರೆ ಸಾಕು, – ಯಪ್ಪಾ.. ಮೈ ನವಿರೇಳಿಸುತ್ತೆ ಆರಗ ಜ್ನಾನೇಂದ್ರರ ಮಾತು !!
Araga jnanendra: ಇವತ್ತೊಂದು ದಿನ, ಅದೂ ಮಧ್ಯಾಹ್ನದ ವರೆಗೆ ನನ್ನ ಜೀವವಿದ್ದರೆ, ನಾನು ಉಸಿರಾಡುತ್ತಿದ್ದರೆ ಸಾಕು. ನನ್ನ ಬದುಕು ಸಾರ್ಥಕ ಆಗುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga jnanendra) ಹೇಳಿದ್ದಾರೆ.
ಹೌದು, ಅಯೋಧ್ಯೆಯಲ್ಲಿ(Ayodhya) ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿಸದಂತಾಗಿದೆ. ಈ ದಿನಕ್ಕಾಗಿ ಅದೆಷ್ಟು ಜೀವಗಳು ಕಾದು ಕುಳಿತಿದ್ದವೋ ತಿಳಿಯದು. ಇಂದು ಎಷ್ಟು ಜೀವಗಳು ಆನಂದ ಭಾಷ್ಪ ಸುರಿಸಿದ್ದಾವೋ ತಿಳಿಯದು. ಒಟ್ಟಿನಲ್ಲಿ ಎಲ್ಲೆಡೆ ಸಂಭ್ರಮ, ಸಂಭ್ರಮ ಅಷ್ಟೆ. ಹೀಗೆ ಸಂಭ್ರಮಿಸಿದವರಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಒಬ್ಬರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನನ್ನ ಜೀವನದ ಅತಿ ಸಂತಸದ ಈ ದಿನವನ್ನು ನಾನು ನೋಡುತ್ತೇನೆ ಎನ್ನುವ ಭರವಸೆ ಖಂಡಿತ ನನಗೆ ಇರಲಿಲ್ಲ,ನನಗೆ ಈ ದಿನದ ಸಂಭ್ರಮವನ್ನು ಖುಷಿಯನ್ನು ಸಂತೋಷವನ್ನು ಆನಂದವನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ. ಈ ಪರಮಾನಂದದ ಕ್ಷಣಗಳನ್ನು ಹೇಳಲು ಶಬ್ಧಗಳು ಸಾಲುತ್ತಿಲ್ಲ. ಇದಕ್ಕಾಗಿ ಇಂದು ಮಧ್ಯಾಹ್ನದವರೆಗೆ ನನ್ನುಸಿರಿದ್ದರೆ ಸಾರ್ಥಕ ಬದುಕು ನನ್ನದು ಎಂದು ಮೈ ನವಿರೇಳಿಸುವಂತೆ ಹೇಳಿದ್ದಾರೆ.
ಅಲ್ಲದೆ ರಾಮ ಮಂದಿರ ನಿರ್ಮಾಣಕ್ಕೆ ತಾವು ಹೇಗೆ ಹೋರಾಡಿದೆವು, ಬಾಬ್ರಿ ಮಸೀದಿ ದ್ವಂಸ ಹೇಗಾಯಿತು ಹೇಗೆಲ್ಲಾ ಹೋರಾಡಿದವು, ಹೇಗೆ ನಮ್ಮ ರಕ್ತ ಕುದಿಯುತ್ತಿತ್ತು, ಸಂತರು ಹೇಗೆ ಸ್ಪೂರ್ತಿ ತುಂಬಿದರು ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕಟ್ಟುವೆವು ಕಟ್ಟುವೆವು ರಾಮ ಮಂದಿರ ಕಟ್ಟುವೆವು,; “ಕಟ್ಟುವೆವು ಕಟ್ಟುವೆವು ಮಂದಿರವಲ್ಲೇ ಕಟ್ಟುವೆವು”,”ರಾಮನ ಪಾದದ ಮೇಲಾಣೆ ಮಂದಿರವಲ್ಲೇ ಕಟ್ಟುವೆವು “ಈ ತರದ ಘೋಷಣೆ ಕೂಗವಾಗಲೆಲ್ಲಾ ಒಮ್ಮೊಮ್ಮೆ ಇದು ಸಾಧ್ಯನಾ? ಎನಿಸುತ್ತಿತ್ತು ನಾವು ಭ್ರಮೆಗೊಳಾಗುತ್ತಿದ್ದೀವಾ ಭ್ರಮೆ ಹುಟ್ಟಿಸುತ್ತಿದ್ದೀವಾ ಎನಿಸಿದ್ದೂ ಇದೆ. ಆದರೆ ಇಂದು ಅದೆಲ್ಲಾ ನೆರವೇರಿದೆ. ನಮ್ಮ ಶ್ರಮಕ್ಕೆ ಫಲ ಸಿಕ್ಕಿದೆ ಎಂದರು.