Ram Mandir ಪ್ರಾಣ ಪ್ರತಿಷ್ಠೆಗೆ ನಿತ್ಯಾನಂದ; ಅಚ್ಚರಿಯ ಹೇಳಿಕೆ!!

Share the Article

Ram Mandir: ಅಯೋಧ್ಯೆ ರಾಮ ಮಂದಿರ (Ayodhya Ram Mandir)ಪ್ರಾಣಪ್ರತಿಷ್ಠೆಗೆ ಆಹ್ವಾನಿತ ಗಣ್ಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಅನೇಕ ಆಹ್ವಾನಿತ ಗಣ್ಯರು ಆಯೋಧ್ಯೆಗೆ ಆಗಮಿಸಲಿದ್ದಾರೆ. ಈ ನಡುವೆ, ಪ್ರಾಣಪ್ರತಿಷ್ಠೆಗೆ ಕೈಲಾಸ ದೇಶದ ನಿತ್ಯಾನಂದ(Nityananda) ಸ್ವಾಮಿ ಆಗಮಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Pratap Simha: ರಾಮ ಮಂದಿರ ಪೂಜೆಗೆ ಬಂದ ಪ್ರತಾಪ್‌ ಸಿಂಹಗೆ ಘೇರಾವ್‌; ವಾಪಸ್‌ ಬಂದ ಸಂಸದ!!!

ಭಾರತದಿಂದ ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆ ಕುರಿತು ಮಾತನಾಡಿದ್ದಾರೆ. ಅಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಯ ಅಧಿಕೃತ ಆಹ್ವಾನ ಬಂದಿದ್ದು, ಹೀಗಾಗಿ ಆಯೋಧ್ಯೆಗೆ ತೆರಳಿ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಹತ್ವದ ಸಂದೇಶ ರವಾನಿಸಿರುವ ನಿತ್ಯಾನಂದ, ಯಾರೂ ಕೂಡ ರಾಮಮಂದಿರ ಪ್ರಾಣಪ್ರತಿಷ್ಠೆ ನೋಡುವುದನ್ನು ತಪ್ಪಿಸಬೇಡಿ. ಭಗವಾನ್ ರಾಮಲಲ್ಲಾ ಮೂರ್ತಿಯನ್ನು ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನನಗೆ ರಾಮ ಮಂದಿರ ಪ್ರಾಣಪ್ರತಿಷ್ಠೆಯ ಅಧಿಕೃತ ಆಹ್ವಾನ ಬಂದಿದೆ. ನಾನು ಆಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.ನಿತ್ಯಾನಂದ ಖುದ್ದು ಆಯೋಧ್ಯೆಗೆ ಆಗಮಿಸುವುದಾಗಿ ಹೇಳಿಕೊಂಡಿರುವ ಬೆನ್ನಲ್ಲೇ ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತಿದೆ.

Leave A Reply