Bigg Boss ಸ್ಪರ್ಧಿ ಡ್ರೋನ್‌ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ; ಫಿನಾಲೆಗೆ ಇರಲ್ವ ಪ್ರಬಲ ಸ್ಪರ್ಧಿ!!!

Share the Article

Drone Pratap: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ಪ್ರತಾಪ್‌ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಕೋರ್ಟ್‌ನಿಂದ ಸಮನ್ಸ್‌ ಜಾರಿಯಾಗಿದೆ. ಪ್ರತಾಪ್‌ ಅವರ ವಿರುದ್ಧ ಇತ್ತೀಚೆಗೆ ಮಾನನಷ್ಟು ಮೊಕದ್ದಮೆಯೊಂದನ್ನು ಹಾಕಲಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಗಿ ಪ್ರತಾಪ್‌ ಅವರು ಬಿಗ್‌ಬಾಸ್‌ನಲ್ಲಿ ಹೇಳಿಕೊಂಡಿದ್ದರು. ಹುಚ್ಚ ಎಂದು ಹೇಳಿದ್ದು, ತಲೆಗೆ ಹೊಡೆದು ತೊಂದರೆ ಕೊಟ್ಟಿದ್ದರು. ಅಲ್ಲದೇ ಹುಚ್ಚ ಅಂತ ಪೇಪರ್‌ಗೆ ಸಹಿ ಹಾಕು ಎಂದು ಒತ್ತಾಯ ಮಾಡಿದ್ದರು ಎಂದು ಪ್ರತಾಪ್‌ ಅವರು ಬಿಬಿಎಂಪಿ ನೋಡಲ್‌ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: Ram Mandir Inauguration: ನಾವು ಭೂತ ಪೂಜೆ ಮಾಡೋರು, ರಾಮಮಂದಿರಕ್ಕೆ ಹೋಗಲ್ಲ; ಬಿ.ಕೆ.ಹರಿಪ್ರಸಾದ್ ಶಾಕಿಂಗ್ ಹೇಳಿಕೆ!!

ಈ ಸಂಬಂಧ ಪ್ರಯಾಗ್‌ ರಾಜ್ ಅವರು 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹಾಗೂ ಇನ್ನೋರ್ವ ಅಧಿಕಾರಿ ಎರಡು ಕೋಟಿ ರೂ. ಮೊಕದ್ದಮೆ ಹೂಡಿದ್ದರು.

ಇದೀಗ ಈ ಸಂಬಂಧ ಕೋರ್ಟ್‌ನಿಂದ ಪ್ರತಾಪ್‌ ಅವರಿಗೆ ಸಮನ್ಸ್‌ ಜಾರಿಯಾಗಿದೆ ಎಂದು ತಿಳಿದು ಬಂದಿದೆ. ಫೆ.20 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ.

Leave A Reply