Karnataka: CM Siddaramaiah ಸರಕಾರದಿಂದ ಭರ್ಜರಿ ಸಿಹಿ ಸುದ್ದಿ; ಈ ವಾಹನಗಳಿಗೆ ತೆರಿಗೆ ವಿನಾಯಿತಿ ಘೋಷಣೆ!!
Karnataka Tax Discount: ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka)ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ (Scrap) ಹಾಕಿ, ಹೊಸ ಎಲೆಕ್ಟ್ರಿಕ್ ವಾಹನ (Electric vehicles) ಖರೀದಿ ಮಾಡುವವರಿಗೆ ದೊಡ್ದ ಸಿಹಿಸುದ್ದಿ ನೀಡಿದೆ. ರೂ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ (H.K.Patil) ಸಚಿವ ಸಂಪುಟ ಸಭೆಯಲ್ಲಿ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ರಿಯಾಯಿತಿ ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ (Electric Two-Wheelers) ರೂ.1,000 ದಿಂದ ರೂ.5,000 ವರೆಗೆ ತೆರಿಗೆ ರಿಯಾಯಿತಿ ದೊರೆಯಲಿದೆ.
ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳಿಗೆ 10,000 ತೆರಿಗೆ ರಿಯಾಯಿತಿ ಸಿಗಲಿದೆ. ರೂ.5 – 10 ಲಕ್ಷ ಮೌಲ್ಯದ ವಾಹನಗಳಿಗೆ ರೂ.20,000, ರೂ.10 – 15 ಲಕ್ಷ ಬೆಲೆಯ ವಾಹನಗಳಿಗೆ ರೂ.30,000, ರೂ.15 – 20 ಲಕ್ಷ ಬೆಲೆಬಾಳುವ ಎಲೆಕ್ಟ್ರಿಕ್ ವಾಹನಗಳಿಗೆ ರೂ.40,000 ಹಾಗೂ ರೂ.20 ಲಕ್ಷಕ್ಕಿಂತ ಹೆಚ್ಚಿನ ದರದ ವಾಹನಗಳಿಗೆ ರೂ.50,000 ತೆರಿಗೆ ರಿಯಾಯಿತಿ ಲಭ್ಯವಿದೆ.
ಇನ್ನು 1 ಲಕ್ಷ ರೂಪಾಯಿವರೆಗಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.1,000 ಅದೇ ರೀತಿ, ರೂ.2 ಲಕ್ಷ ಮೌಲ್ಯದ ವಾಹನಗಳಿಗೆ ರೂ.2,000 ರಿಯಾಯಿತಿ ಲಭ್ಯವಾಗಲಿದೆ. ರೂ.4 – 5 ಲಕ್ಷ ಬೆಲೆ ವಾಹನಗಳಿಗೆ ರೂ.5,000 ತೆರಿಗೆ ರಿಯಾಯಿತಿ ಸಿಗಲಿದೆ. ಅದೇ ರೀತಿಯಲ್ಲಿ ಹಳೆಯ ನಾಲ್ಕು-ಚಕ್ರದ ವಾಹನಗಳನ್ನು ಗುಜರಿಗೆ ಹಾಕಿ, ನೂತನ ನಾಲ್ಕು-ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು (New Electric Four-Wheelers) ಖರೀದಿ ಮಾಡುವವರಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ.