Heart attack: ಹೃದಯ ವಿದ್ರಾವಕ ಘಟನೆ; ತಾಳೆ ಮರದಲ್ಲೇ ಹೃದಯಾಘಾತಕ್ಕೀಡಾಗಿ ವ್ಯಕ್ತಿ ಸಾವು!!

Share the Article

Heart Attack: ತೆಲಂಗಾಣದ ಭುವನಗಿರಿ ನಗರದಲ್ಲಿ ತಾಳೆ ಮರದ ಮೇಲೆಯೇ ಹೃದಯಾಘಾತದಿಂದ (Heart attack)ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಇದನ್ನೂ ಓದಿ: Indian Railways: ರಾತ್ರಿ ಮಲಗುವ ಸಮಯ ಸೇರಿ ಭಾರತೀಯ ರೈಲ್ವೇ ತಂದಿದೆ ಹಲವು ಹೊಸ ನಿಯಮ! ಇನ್ನು ಇಷ್ಟು ಗಂಟೆ ಮಾತ್ರ ನಿದ್ರೆಗೆ ಅವಕಾಶ!!!

ಮೃತ ವ್ಯಕ್ತಿಯನ್ನು ರಾಜಣ್ಣಗುಡೆಂ ಗ್ರಾಮದ ನಿವಾಸಿಯಾದ ಲಕ್ಷ್ಮಯ್ಯ ಎಂದು ಗುರುತಿಸಲಾಗಿದೆ. ಲಕ್ಷ್ಮಯ್ಯ ಅವರು ತಾಳೆ ಮರಗಳಿಂದ (Palm Tree)ಮಕರಂದ ಪಡೆಯಲು ಮರ ಹತ್ತಿದ್ದರು ಎನ್ನಲಾಗಿದೆ. ಲಕ್ಷ್ಮಯ್ಯ ಅವರು ಮರದ ಮೇಲೆ ಇದ್ದಾಗಲೇ ಹೃದಯಾಘಾತಕ್ಕೀಡಾಗಿದ್ದು, ತಾಳೆ ಮರದಲ್ಲಿ ತಲೆಕೆಳಗಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕ್ರೇನ್ ತರಿಸಿ ಮೃತದೇಹವನ್ನು ಕೆಳಗೆ ಇಳಿಸಿದ್ದಾರೆ. ತಾಳೆ ಮರದಿಂದ ಮೃತ ವ್ಯಕ್ತಿಯನ್ನು ಕೆಳಗಿಳಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರೇನ್ ನ ಹುಕ್‌ಗೆ ಕಟ್ಟಿ ಶವವನ್ನು ಮರದಿಂದ ಕೆಳಗೆ ಎಳೆದಿರುವುದು ಕಂಡುಬಂದಿದೆ.

Leave A Reply

Your email address will not be published.