ವಿಟ್ಲ: ಅಯ್ಯಪ್ಪ ಮಾಲಾಧಾರಿಗಳಿದ್ದ ಟಿಟಿ ವಾಹನ ಪಲ್ಟಿ!!!

Share the Article

Puttur: ವಿಟ್ಲದ(Vitla)ಚಂದಳಿಕೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ ವಾಹನ ರಸ್ತೆಗೆ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ. ಈ ದುರ್ಘಟನೆಯ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ಶಬರಿಮಲೆಯಿಂದ ವಿಟ್ಲ ರಸ್ತೆ ಮೂಲಕ ಪುತ್ತೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಚಂದಳಿಕೆ ಅಪಾಯಕಾರಿ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಟಿ.ಟಿ ವಾಹನದಲ್ಲಿದ್ದ ಆರು ಮಂದಿ ಮಾಲಾಧಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಶಬರಿಮಲೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಇವರೆಲ್ಲ ಉಜಿರೆ ಮೂಲದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

Leave A Reply