Mangalore: ಜೋಕಟ್ಟೆ ಬಸ್ಸಿನ ಧಾವಂತಕ್ಕೆ ಮಹಿಳೆ ಬಲಿ; ಬ್ರೇಕ್‌ ಹೊಡೆತಕ್ಕೆ ಹೊರಬಿದ್ದ ವೃದ್ಧ ಮಹಿಳೆ, ಚಾಲಕ ಪೊಲೀಸರ ವಶಕ್ಕೆ!!

Share the Article

Mangaluru: ಬಸ್‌ ಚಾಲಕ ಹಠಾತ್‌ ಬ್ರೇಕ್‌ ಹಾಕಿದ ಪರಿಣಾಮ ಮಹಿಳೆಯೋರ್ವರು ಹೊರಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದ ಜೋಕಟ್ಟೆ ಕ್ರಾಸ್‌ ಬಳಿ ನಡೆದಿದೆ.

ಈರಮ್ಮ (65) ಮೃತ ಮಹಿಳೆ. ತನ್ನ ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಸುರತ್ಕಲ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬೆಳಗ್ಗೆ 10.10 ರ ಸುಮಾರಿಗೆ ಬಸ್ಸು ಜೋಕಟ್ಟೆ ಕ್ರಾಸ್‌ ಬಳಿ ಸರ್ವಿಸ್‌ ಸ್ಟೇಷನ್‌ ತಲುಪಿದಾಗ, ಅದರ ಚಾಲಕ ಹಠಾತ್‌ ಬ್ರೇಕ್‌ ಹಾಕಿದ್ದು, ಪರಿಣಾಮ ಚಾಲಕನ ಪಕದ್ದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್ಸಿನಿಂದ ಹೊರಕ್ಕೆ ಬಿದ್ದಿದ್ದಾರೆ. ಅಲ್ಲದೇ, ಬಸ್‌ನ ಹಿಂಭಾಗದ ಎಡ ಚಕ್ರವು ಈರಮ್ಮ ಅವರ ಮೇಲೆ ಚಲಿಸಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಇದನ್ನೂ ಓದಿ: Hanagal Case: ಗ್ಯಾಂಗ್‌ ರೇಪ್‌ ಸಂತ್ರಸ್ತೆಯನ್ನು ಒಂಟಿಯಾಗಿ ಬಿಟ್ಟು ಹೋದ ಪೊಲೀಸ್‌!

ಈ ಕುರಿತು ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave A Reply