Davanagere: ದರ್ಶನ್ ಅಭಿಮಾನಿಯಿಂದ ನೈತಿಕ ಪೋಲೀಸ್ ಗಿರಿ- ಯುವಕನ ಬರಗೈ ಮೇಲೆ ಕರ್ಪೂರ ಹಚ್ಚಿಸಿ ದೌರ್ಜನ್ಯ!!
Davangere: ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಆತನ ಬರಗೈಯಲ್ಲಿ ಕರ್ಪೂರ ಹಚ್ಚಿಸಿ, ಬಸಗಿ ಹೊಡೆಸಿ ದೌರ್ಜನ್ಯ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು, ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ದಾವಣಗೆರೆ(Davangere) ನಗರದ ಗೀತಾಂಜಲಿ ಥಿಯೇಟರ್ ಬಳಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ಯುವಕನ ಮೇಲೆ ದರ್ಪ ತೋರಿದ್ದಾನೆ.
https://x.com/Rolexgavunda/status/1746098239311335689?t=YFsGCLIZzriqjYxW1O5P_Q&s=08
ಅಂದಹಾಗೆ ಲಿಂಗರಾಜು ಎಂಬ ಯುವಕ ದರ್ಶನ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಎಂದು ದರ್ಶನ್ ಅಭಿಮಾನಿ (Darshan Fan) ಎಂದು ಹೇಳಿಕೊಂಡ ದೊಡ್ಡೇಶ್ ಎಂಬಾತ ಈ ಯುವಕನಿಗೆ ಥಿಯೇಟರ್ ಎದುರೇ ಶಿಕ್ಷೆ ನೀಡಿದ್ದಾನೆ. ಯುವಕನ ಬರಿಗೈ ಮೇಲೆ ಕರ್ಪೂರ ಹಚ್ಚಿ ದರ್ಶನ್ ಪೋಸ್ಟರ್ ಗೆ ಬೆಳಗುವಂತೆ ಹೇಳಿ ಬೆಳಗಿಸಿದ್ದಾನೆ. ಬಳಿಕ ಎರಡೂ ಕೈಗಳನ್ನು ಕಿವಿಗೆ ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಹೇಳಿ ತಾಕೀತು ಮಾಡಿದ್ದು, ಬಸ್ಕಿ ಹೊಡೆಸಿ ದರ್ಪ ಮೆರೆದಿದ್ದಾನೆ. ಅಷ್ಟೇ ಅಲ್ಲದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಏನಿದು ಘಟನೆ?
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ವಡ್ನಳ್ಳಿ ಗ್ರಾಮದ ಯುವಕ ಕೆಲ ದಿನಗಳಿಂದ ನಟ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಥಿಯೇಟರ್ ಗೆ ಬಂದಿದ್ದ ಆ ಯುವಕನನ್ನು ಹಿಡಿದ ದೊಡ್ಡೇಶ್ ಎಂಬಾತ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ ಈ ರೀತಿ ದರ್ಪ ಮೆರೆದಿದ್ದಾನೆ.
ಯಾರು ಈ ದೊಡ್ಡೇಶ್?!
ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಿರುವ ದೊಡ್ಡೇಶ್ ಈ ಹಿಂದೆ ದುನಿಯಾ ವಿಜಯ್ ಅಭಿಮಾನಿ ಸಂಘದಲ್ಲಿದ್ದ ಎನ್ನಲಾಗುತ್ತಿದೆ. ಇದೀಗ ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಈಗ ಈ ಕೃತ್ಯ ಎಸಗಿದ್ದಾನೆ. ದೊಡ್ಡೇಶ್ ಮೇಲೆ ಈ ಹಿಂದೆಯೂ ನೈತಿಕ ಪೊಲೀಸ್ಗಿರಿ ಎಸಗಿದ ಆರೋಪವಿದೆ. ಚಿತ್ರಮಂದಿರವೊಂದರಲ್ಲಿ ಒಮ್ಮೆ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ಎಸಗಿದ್ದನಂತೆ ದೊಡ್ಡೇಶ್.