Killer CEO: ಮಗುವಿಗೆ ಲಾಲಿ ಹಾಡಿಸಿ ಮಲಗಿಸಿ ಪುಟ್ಟ ಕಂದನ ಉಸಿರುಗಟ್ಟಿಸಿ ಕೊಂದ ಹಂತಕಿ ಸೂಚನಾ!!!

ಪೊಲೀಸರ ಮುಂದೆ ಇನ್ನಷ್ಟು ಸ್ಫೋಟಕ ಮಾಹಿತಿ ಬಹಿರಂಗ!

Share the Article

Killer CEO: ಗಂಡನ ಮೇಲಿನ ಸಿಟ್ಟಿಗೆ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪಿ ಹೊಂದಿರುವ ಸಿಇಒ ಸೂಚನಾ ಸೇಠ್‌ ತನಿಖಾಧಿಕಾರಿಗಳ ಮಧ್ಯೆ ಭೀಕರ ಸತ್ಯವೊಂದನ್ನು ಬಹಿರಂಗಗೊಳಿಸಿರುವ ಕುರಿತು ಮಾಹಿತಿ ವರದಿಯಾಗಿದೆ. ಹತ್ಯೆ ಮಾಡುವ ಮೊದಲು ನಾನು ಮಗುವಿಗೆ ಲಾಲಿ ಹಾಡಿ ಮಲಗಿಸಿ ಅನಂತರ ಉಸಿರುಗಟ್ಟಿಸಿ ಹತ್ಯೆ ಮಾಡಿದೆ ಎಂದು ಹೇಳಿದ್ದಾರೆ.

ವಿಚ್ಛೇಧಿತ ಪತಿ ವೆಂಕಟ್‌ ರಾಮನ್‌ ಮಗುವನ್ನು ಭೇಟಿ ಮಾಡಬೇಕೆಂಬ ಒತ್ತಡ ಕೂಡಾ ಇತ್ತು. ಅವನು ಮಗುವಿಗೆ ಕೆಟ್ಟ ನಡವಳಿಕೆಗಳನ್ನು ಕಲಿಸಿಕೊಡುತ್ತಾನೆ. ಮಗುವನ್ನು ಒಂದು ದಿನವೂ ಅವಳ ಬಳಿ ಕಳಿಸಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಸೂಚನಾ ಸೇಠ್‌ ತಂಗಿದ್ದ ಗೋವಾದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಪೊಲೀಸರು ಅಲ್ಲಿ ಘಟನೆಯ ಮರುಸೃಷ್ಟಿ ಮಾಡಿದ್ದು, ಈ ವೇಳೆ ಈ ಮಾಹಿತಿ ನೀಡಿದ್ದಾಳೆ. ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ಪೋರ್ಕ್‌ ತೆಗೆದುಕೊಂಡು ನನ್ನ ಕೈಗಳ ನರಕ್ಕೆ ಚುಚ್ಚಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದೆ. ಮಗುವಿನ ವಸ್ತುವಿನೊಂದಿಗೆ ಹೇಗೆ ಸೂಟ್‌ಕೇಸ್‌ನಲ್ಲಿ ತುಂಬಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ.

Leave A Reply