Mangaluru ಪತ್ನಿಯಿಂದಲೇ ಪತಿಯ ಭೀಕರ ಕೊಲೆ!!

Share the Article

Dakshina Kannada Crime News: ಕೂಲಿ ಕಾರ್ಮಿಕನೋರ್ವನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಗರದ ನಂತೂರು ಬಳಿ ಸಂಭವಿಸಿದೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂಲತಃ ಗದಗ ಜಿಲ್ಲೆಯ ಇಟಗಿ ಗ್ರಾಮದ ನಿವಾಸಿ ಹನುಮಂತಪ್ಪ ಪೂಜಾರಿ (39) ಕೊಲೆಯಾದವರು. ಪತ್ನಿ ಗೀತಾ (34) ಆರೋಪಿಯಾಗಿದ್ದಾರೆ. ಈಕೆಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಹನುಮಂತಪ್ಪ ವಿಪರೀತ ಕುಡಿದು ದಿನಾ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಪತ್ನಿಗೆ ಹೊಡೆಯುತ್ತಿದ್ದ ಎಂದು ವರದಿಯಾಗಿದೆ. ಜ.10 ರಂದು ಹನುಮಂತಪ್ಪ ಪತ್ನಿಯೊಂದಿಗೆ ಗಲಾಟೆ ಮಾಡಿದ್ದು, ಪತ್ನಿ, ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದ ಇವರ ಮತ್ತೆ ಗಲಾಟೆ ನಡೆದಿದೆ. ಈ ನಡುವೆ ಪತ್ನಿ ಗೀತಾ ಹನುಮಂತಪ್ಪನ ಕುತ್ತಿಗೆ ಬಿಗಿ ಹಿಡಿದು ಪಂಚೆಯಿಂದ ಬಿಗಿದು ಹತ್ಯೆ ಮಾಡಿದ್ದಾಗಿ ವರದಿಯಾಗಿದೆ. ಪತಿಯ ಹಿಂಸೆ ತಾಳಲಾರದೆ ಹತ್ಯೆ ಮಾಡಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.

ಹನುಮಂತ ಪೂಜಾರಿ ವಿಪರೀತ ಕುಡಿದು ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದರು ಎಂಬುವುದಾಗಿ ಪತ್ನಿ ಗೀತಾ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ನಡೆದ ದಿನ ಕುಡಿದು ಬಂದಿದ್ದ ಹನುಮಂತಪ್ಪ ತಡರಾತ್ರಿ 2 ಗಂಟೆಗೆ ನೋಡಿದಾಗ ಗೇಟಿನ ಬಳಿ ವಾಂತಿ ಮಾಡಿಕೊಂಡು ಮಾತನಾಡದ ಸ್ಥಿತಿಯಲ್ಲಿದ್ದ. ನನ್ನ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆತ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಆದರೆ ಅಷ್ಟರಲ್ಲೇ ಆತ ಮೃತ ಹೊಂದಿರುವುದಾಗಿ ವೈದ್ಯರು ಹೇಳಿರುವುದಾಗಿ ಹೆಂಡತಿ ಪೊಲೀಸರಿಗೆ ಈ ಮೊದಲು ದೂರಿನಲ್ಲಿ ತಿಳಿಸಿದ್ದಳು. ನಂತರ ತನಿಖೆಯಿಂದ ಕೊಲೆ ಮಾಡಿರುವುದು ಪತ್ನಿ ಗೀತಾ ಎಂದು ತಿಳಿದು ಬಂದಿದೆ.

Leave A Reply