500rupee Note ban: 500 ರೂಪಾಯಿ ನೋಟು ಮತ್ತೆ ಬ್ಯಾನ್ ?! ಕೇಂದ್ರದಿಂದ ಬಂತು ಬಿಗ್ ಅಪ್ಡೇಟ್!!
500rupee Note ban: ಕೆಲ ಸಮಯದಿಂದ ಸೋಷಿಯಲ್ ಮೀಡಿಯಾಗಳಲ್ಲಿ 500ರೂ ಮುಖಬೆಲೆಯ ನೋಟುಗಳು ಬ್ಯಾನ್ ಆಗಲಿವೆ ಎಂಬಂತ ಸುದ್ದಿಗಳು ಹರಿದಾಡುತ್ತಿದ್ದು, ಸದ್ಯ ಈ ಬಗ್ಗೆ RBI ಸ್ಪಷ್ಟೀಕರಣ ನೀಡಿದೆ.
ಹೌದು, ಕೆಲವು ದಿನಗಳಿಂದ ನಕ್ಷತ್ರ (*) ಚಿಹ್ನೆಯಿರುವ 500 ರೂಪಾಯಿ ನೋಟುಗಳು ಅಮಾನ್ಯವಾಗಿವೆ(500rps Note ban) ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಕೇಂದ್ರ ಸರ್ಕಾರದ(Central government) ಪಿಐಬಿ ಫ್ಯಾಕ್ಟ್ ಚೆಕ್ ಈ ಬಗ್ಗೆ ಸ್ಪಷ್ಟತೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರವು ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ಸಮಯದಿಂದ ನಡೆಯುತ್ತಿರುವ ಈ ಅಭಿಯಾನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದನ್ನು ನಾವು ಹೇಳಿಯೂ ಇಲ್ಲ. ಅಲ್ಲದೆ ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿಳಿಸಿದ್ದು, ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ 500 ರೂ ನೋಟುಗಳು 2016 ರಿಂದ ಚಲಾವಣೆಯಲ್ಲಿವೆ. ಇವು ನಕಲಿ ನೋಟುಗಳಲ್ಲ ಎಂದು ದೃಢಪಡಿಸಿದೆ.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಆರ್ಬಿಐ(RBI) ಈಗಾಗಲೇ ಸ್ಪಷ್ಟನೆ ನೀಡಿದೆ. ಕರೆನ್ಸಿ ನೋಟು ಸಂಖ್ಯೆ ಫಲಕದಲ್ಲಿ ನಕ್ಷತ್ರ (*) ಚಿಹ್ನೆಯನ್ನು ಮುದ್ರಿಸಿದರೆ, ಅದನ್ನು ಬದಲಿಸಿದ ಅಥವಾ ಮರುಮುದ್ರಿತ ನೋಟಾಗಿ ಗುರುತಿಸಬೇಕು ಎಂದು ತಿಳಿಸಿದೆ.