Bantwal: ಬೆಳಂಬೆಳಿಗ್ಗೆ ಮನೆಯೊಂದಕ್ಕೆ ನುಗ್ಗಿದ ಮುಸುಕುಧಾರಿಗಳು; ನಗನಗದು ದೋಚಿ ಪರಾರಿ!!!

Share the Article

Bantwala: ನಾಲ್ವರು ಮುಸುಕುಧಾರಿಗಳು ಬೆಳಂಬೆಳಿಗ್ಗೆ ವಗ್ಗದಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ.ಗಳನ್ನು ದೋಚಿ ಪರಾರಿಯಾಗಿರುವ ಘಟನೆ ವಗ್ಗದಲ್ಲಿ ನಡೆದಿದೆ.

ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೇ ಪಾರ್ಕ್‌ ಮುಂಭಾಗದಲ್ಲಿರುವ ಪ್ಲೋರಿಯನ್‌ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ನಡೆದಿದೆ ಎಂದು ವರದಿಯಾಗಿದೆ.

ತಾಯಿ ಪ್ಲೋರಿಯಾ ಪಿಂಟೋ, ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಮನೆಯಲ್ಲಿದ್ದ ಸಮಯದಲ್ಲಿ ದರೋಡೆ ಮಾಡಲಾಗಿದೆ. ಗೋದ್ರೇಜ್‌ನಲ್ಲಿ ಇದ್ದ ಸುಮಾರು 2.90 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಜೊತೆಗೆ 30 ಸಾವಿರ ನಗದು ಹಾಗೂ ಒಂದು ಮೊಬೈಲ್‌ ಫೋನ್‌ ನ್ನು ಕಳ್ಳರು ದೋಚಿದ್ದಾರೆ.

ಇಂದು ಬೆಳಗ್ಗೆ 6.30 ರ ಸುಮಾರಿಗೆ ಬೆಲ್‌ ಹಾಕಿದ್ದು, ಬಾಗಿಲು ತೆಗೆದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದು, ನಂತರ ನಗನಗದು ಕೊಡುವಂತೆ ಬೆದರಿಕೆ ಒಡ್ಡಿದ್ದಾರೆ. ಬೆದರಿಕಗೆ ಬಗ್ಗದಾಗ ನಾಲ್ವರು ಕೈಯಲ್ಲಿದ್ದ ಚಾಕು ತೋರಿಸಿ ಕೊಲ್ಲುವ ಬೆದರಿಕೆಯೊಡ್ಡಿದಾಗ ಗೋದ್ರೇಜ್‌ನ ಬೀಗದ ಕೀ ನೀಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಗ್ರಾಮಾಂತರ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌, ಎಸ್‌.ಐ.ಹರೀಶ್‌ ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply