Puttur: ಅಂಗಡಿಯೊಂದರ ಎದುರು ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ !

Share the Article

Puttur: ಬಡಗನ್ನೂರು ಗ್ರಾಮದ ಪೆರಿಗೇರಿ ನಿವಾಸಿಯೊಬ್ಬರು ಸ್ಥಳೀಯ ಅಂಗಡಿಯೊಂದರ ಮುಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.11 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಪೆರಿಗೇರಿ ದಿ.ಅಪ್ಪಯ್ಯ ನಾಯ್ಕ ಅವರ ಪುತ್ರ ಜಾನು ನಾಯ್ಕ (45ವ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರು ಮನೆಯ ಸಮೀಪದ ದುರ್ಗಾಸ್ಟೋ‌ರ್ ಎಂಬ ಅಂಗಡಿಯ ಎದುರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

Leave A Reply