Ravindar Chandrasekaran: ಅನಾರೋಗ್ಯದಿಂದ ಹಾಸಿಗೆ ಹಿಡಿದ್ರಾ ರವೀಂದರ್ ಚಂದ್ರಶೇಖರ್ ?! ಪತ್ನಿ ಮಹಾಲಕ್ಷ್ಮೀ ಹೇಳಿದ್ದೇನು??

Share the Article

Ravindar Chandrasekaran: ತಮಿಳು ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran)ಮದುವೆ ಆದ ಬಳಿಕ ಒಂದಲ್ಲಾ ಒಂದು ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈ ನಡುವೆ, ರವೀಂದರ್‌ ವಂಚನೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಮನೆಗೆ ಮರಳಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿಲ್ಲ.

ಈ ನಡುವೆ ಮಹಾಲಕ್ಷ್ಮೀ ಪತಿ ರವೀಂದರ್‌ ದಡೂತಿ ದೇಹದಿಂದ ಕಷ್ಟ ಪಡುವುದನ್ನು ಗಮನಿಸಿ, ತೂಕ ಕಡಿಮೆ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ತನ್ನ ಸೀರಿಯಲ್‌ ಕೆಲಸದ ನಡುವೆಯೇ ಮಹಾಲಕ್ಷ್ಮೀ ಪತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರಂತೆ. ಆದರೆ, ನಿತ್ಯದ ಡಯಟ್‌ ಹಲವು ಕಾರಣಕ್ಕೆ ಹಾದಿ ತಪ್ಪುತ್ತಿದೆ. ಪತಿಯ ತೂಕ ಇಳಿಸಲು ಹೋಗಿ ಅವರ ತೂಕವನ್ನೇ ಹೆಚ್ಚಿಸಿಕೊಳ್ಳುತ್ತಿರುವುದಾಗಿ ಇತ್ತೀಚೆಗೆ ಮಹಾಲಕ್ಷ್ಮೀ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ, ನಾನು ಅವರ ಜತೆಗಿದ್ದಾಗ ನನ್ನ ಡಯಟ್‌ ತಾಳ ತಪ್ಪುತ್ತಿದೆ. ರಾತ್ರಿ ನಾನು ಮಲಗಿದ್ದರೂ, ನನ್ನನ್ನು ಎಬ್ಬಿಸಿ ತಿನ್ನುವಂತೆ ಒತ್ತಾಯ ಮಾಡುತ್ತಾರೆ ಎಂದು ಮಹಾಲಕ್ಷ್ಮೀ ಹೇಳಿಕೊಂಡಿದ್ದರು.

ಇದನ್ನೂ ಓದಿ: Mobile cleaning tips: ಮೊಬೈಲ್ ಕ್ಲೀನ್ ಮಾಡುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ !!

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಪತಿಯ ಆರೋಗ್ಯದ ಬಗ್ಗೆ ಮಹಾಲಕ್ಷ್ಮೀ ಮಾತಾಡಿದ್ದಾರೆ. ಇನ್‌ಸ್ಟಾದಲ್ಲಿ ಮಹಾಲಕ್ಷ್ಮೀ ಶೇರ್‌ ಮಾಡಿದ್ದ ಫೋಟೋ ಒಂದಕ್ಕೆ ನೆಟ್ಟಿಗರೊಬ್ಬರು, “ಕಳೆದೊಂದು ವಾರದಿಂದ ರವಿ ಸರ್‌ ಯಾಕೆ ಬಿಗ್‌ಬಾಸ್‌ ವಿಮರ್ಶೆ ಮಾಡುತ್ತಿಲ್ಲ. ಅವರು ಹುಷಾರಾಗಿದ್ದಾರಾ?” ಎಂದು ಪ್ರಶ್ನೆ ಮಾಡಿದ್ದಾರೆ. ಮಹಾಲಕ್ಷ್ಮೀಯವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ, “ಪತಿಯ ಆರೋಗ್ಯ ಸರಿಯಿಲ್ಲ. ಆದಷ್ಟು ಬೇಗ ಅವರು ಮರಳಲಿದ್ದಾರೆ. ವಿಮರ್ಶೆಗಳನ್ನೂ ಮಾಡಲಿದ್ದಾರೆ” ಎಂದು ನೆಟ್ಟಿಗರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

Leave A Reply