Yogi Adityanath: ರಾಮಲಲ್ಲ ಪ್ರಾಣಪ್ರತಿಷ್ಠೆ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಯೋಗಿ ಆದಿತ್ಯನಾಥ್ !!

Yogi Adityanath ರಾಮ ಮಂದಿರ ಉದ್ಘಾಟನೆಗೆ, ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಅಯೋಧ್ಯೆ ಸಿಂಗಾರಗೊಳ್ಳುತ್ತಿದೆ. ಕೋಟ್ಯಾಂತರ ಹಿಂದೂಗಳ ಮನಸ್ಸು ರಾಮನ ದರ್ಶನಕ್ಕೆ ಮಿಡಿಯುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಹೌದು, ರಾಮ ಮಂದಿರ(Rama mandir) ಪ್ರಾಣ ಪ್ರತಿಷ್ಠೆ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಮೊಘಲರ ದಾಳಿ ಬಳಿಕ ಘಾಜಿಯಾಬಾದ್ ಆಗಿ ಬದಲಾಗಿದ್ದ ನಗರವನ್ನು ಮರುನಾಮಕರಣ ಮಾಡಲು ಮುಂದಾಗಿದೆ. ಹೀಗಾಗಿ ಈ ನಗರಕ್ಕೆ ಮೂಲ ಹೆಸರನ್ನೇ ಇಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ಘಾಜಿಯಾಬಾದ್(Ghasiyabad) ಮುನ್ಸಿಪಲ್ ಕಾರ್ಪೋರೇಶನ್ ಈಗಾಗಲೇ ಸಭೆ ನಡೆಸಿ ಎರಡು ಹೆಸರನ್ನು ಅಂತಿಮಗೊಳಿಸಿದೆ. ಈ ಪ್ರಸ್ತಾವನೆಯನ್ನು ಯೋಗಿ ಸರ್ಕಾರಕ್ಕೆ ಕಳುಹಿಸಿದೆ. ರಾಮ ಮಂದಿರ ಉದ್ಘಾಟನೆ ಬಳಿಕ ಘಾಜಿಯಾಬಾದ್‌ ಮರುನಾಮಕರಣ ಮಾಡುವ ಸಾಧ್ಯತೆ ಇದೆ. ಘಾಜಿಯಾಬಾದ್ ಬದಲು ಗಜನಗರ ಅಥಾ ಹರಿಂದಿ ನಗರ ಸೇರಿದಂತೆ ಕೆಲ ಹೆಸರನ್ನು ಚರ್ಚಿಸಲಾಗಿದೆ. ಇದೀಗ ಕೆಲ ಹೆಸರಿನ ಜೊತೆಗೆ ಮರುನಾಮಕರಣ ಪ್ರಸ್ತಾವನೆಯನ್ನು ಯುಪಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: Vijayapura: KSRTC ಬಸ್ ಅಡಿಗೆ ಹಾರಿ ಯುವಕ ಆತ್ಮಹತ್ಯೆ- ಯಪ್ಪಾ.. ನಡುಕ ಹುಟ್ಟಿಸುತ್ತೆ ಸಿಸಿಟಿವಿ ದೃಶ್ಯ

ಘಾಜಿಯಾಬಾದ್ ಅನ್ನೋ ಹೆಸರು ಬಂದದ್ದು ಹೇಗೆ?

1740ರಲ್ಲಿ ಘಾಜಿಯಾಬಾದ್ ನಗರದ ಮೇಲೆ ಮೊಘಲರು ದಾಳಿ ಮಾಡಿದ್ದರು. ಇಲ್ಲಿನ ರಾಜರ ಸೋಲಿಸಿ ಇಡೀ ನಗರವನ್ನೇ ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಹಲವು ಮಂದಿರಗಳನ್ನು ಒಡದು ಮಸೀದಿಗಳನ್ನು ನಿರ್ಮಾಣ ಮಾಡಲಾಗಿತ್ತು. ಮೊಘಲ ರಾಜ ಮೊಹಮ್ಮದ್ ಶಾ ಆಡಳಿತದಲ್ಲಿ ಹಿಂದೂ ಸಂಘರ್ಷ, ಆಕ್ರೋಶವನ್ನು ತಣ್ಣಗಾಗಿಸಿ ಇಸ್ಲಾಂ ಆಡಳಿತ ಜಾರಿ ಮಾಡಲು ನೆರವಾದ ಘಾಜಿಉದ್ದೀನ್ ತನ್ನ ಹೆಸರನ್ನೇ ನಗರಕ್ಕಿಟ್ಟಿದ್ದ. ಘಾಜಿಉದ್ದೀನ್ ನಗರ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಉದ್ದ ಹೆಸರಿನ ಕಾರಣ ಬಳಿಕ ಘಾಜಿಯಾಬಾದ್ ಎಂದೇ ಗುರಿತಸಲ್ಪಟ್ಟಿತು.

Leave A Reply

Your email address will not be published.