Killer CEO: ಹೆತ್ತ ಕರುಳನ್ನೇ ಕೊಂದ ಹಂತಕಿ ಸುಚನಾ, 6 ದಿನ ಗೋವಾ ಪೊಲೀಸ್‌ ಕಸ್ಟಡಿಗೆ!!

Share the Article

Suchana Seth Killer CEO: ನಾಲ್ಕು ವರ್ಷದ ಮಗನನ್ನು ಕೊಂದ ಹಂತಕಿ ಸಿಇಒ ಸುಚನಾಳನ್ನು ಗೋವಾ ಕೋರ್ಟ್‌ ಆರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಗೋವಾದ ಮಾಪುಸಾ ಕೋರ್ಟ್‌ ಗೆ ಹಂತಕಿ ಸುಚನಾಳನ್ನು ಪೊಲೀಸರು ಒಪ್ಪಿಸಿದ್ದು, ನಂತರ ವಿಚಾರಣೆ ನಡೆಸಿದ ಕೋರ್ಟ್‌ ಸುಚನಾಳನ್ನು ಆರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ.

ಗೋವಾದಲ್ಲಿರುವ ಹೋಟೆಲ್‌ನಲ್ಲಿ ತನ್ನ ಸ್ವಂತ ಮಗನನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಶವ ತುಂಬಿ ರವಾನಿಸುತ್ತಿದ್ದ ಸ್ಟಾರ್ಟ್‌ ಅಪ್‌ ಫೌಂಡರ್‌ ಹಾಗೂ ಸಿಇಓ ಇವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಕಾರಿನ ಡಿಕ್ಕಿಯಲ್ಲಿದ್ದ ಸೂಟ್‌ಕೇಸ್‌ ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಕಾಮುಕ, ಕಂಬಕ್ಕೆ ಕಟ್ಟಿ ಥಳಿತ!

ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಗೋವಾ ಪೊಲೀಸರು ಆರೋಪಿ ಸುಚನಾ ಅವರನ್ನು ವಶಕ್ಕೆ ಪಡೆದು ಗೋವಾಕ್ಕೆ ಕರೆದೊಯ್ದಿದ್ದರು. ಪತಿ ಮೇಲಿನ ಕೋಪಕ್ಕೆ ತಾನು ಹೆತ್ತ ಮಗನನ್ನೇ ಕೊಂದು ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ.

Leave A Reply