Physical Abuse: ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಕಾಮುಕ; ಕಂಬಕ್ಕೆ ಕಟ್ಟಿ ಥಳಿತ!

Share the Article

Assault Case: ಮಹಿಳೆಯೊಬ್ಬರು ಸ್ನಾನ ಮಾಡುವಾಗ ದುಷ್ಟನೊಬ್ಬ ವೀಡಿಯೋ ರೆಕಾರ್ಡ್‌ ಮಾಡಿದ ಘಟನೆಯೊಂದು ನಡೆದಿದೆ. ಲಾಡ್‌ಸಾಬ್‌ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ.

ಮಹಿಳೆ ಸ್ನಾನಕ್ಕೆಂದು ಹೋಗುವ ಮೊದಲು ಬಾತ್‌ರೂಂ ನ ಕಿಟಕಿಯನ್ನು ಮುಚ್ಚಿದ್ದಳು. ಆದರೆ ಸ್ನಾನ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಬಾತ್‌ರೂಂ ನ ಕಿಟಕಿ ತೆರೆದಿರುವುದು ಕಂಡಿದೆ. ಜೊತೆಗೆ ಯಾರೋ ನಿಂತಿರುವುದು ಜೊತೆಗೆ ಮೊಬೈಲ್‌ ಹಿಡಿದು ರೆಕಾರ್ಡಿಂಗ್‌ ಮಾಡುವುದು ಗಮನಕ್ಕೆ ಬಂದಿದೆ. ಇದನ್ನು ಕಂಡು ಮಹಿಳೆ ಗಾಬರಿಗೊಂಡು ಕಿರುಚಿದಾಗ ಕಿರಾತಕ ಓಡಿ ಹೋಗಿದ್ದಾನೆ.

Reels ಮಾಡುವುದನ್ನು ನಿಲ್ಲಿಸು ಎಂದಿದ್ದಷ್ಟೇ! ಕೋಪಗೊಂಡ ಪತ್ನಿ ಪತಿಯನ್ನೇ ಮುಗಿಸಿದ್ಳು!!!

ಕಿರುಚಾಟಕ್ಕೆ ಅಕ್ಕ ಪಕ್ಕದ ಮನೆಯವರು ಬಂದಿದ್ದು ವಿಷಯ ತಿಳಿದಾಗ ಓಡಿ ಹೋಗುತ್ತಿದ್ದ ಲಾಡ್‌ಸಾಬ್‌ನನ್ನು ಹಿಡಿದಿದ್ದಾರೆ. ಹಿಡಿದು ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಯನ್ನು ಒಪ್ಪಿಸಿದ್ದಾರೆ.

 

 

Leave A Reply