Ayodhya : ಮುಂದಿನ ವಾರ ನಡೆಯಬೇಕಿದ್ದ ಅಯೋಧ್ಯಾ ರಾಮಲಲ್ಲಾ ಮೆರವಣಿಗೆ ದಿಢೀರ್ ರದ್ದು !!

Ayodhya: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನವರಿ 17ರಂದು ಅಯೋಧ್ಯೆ(Ayodhya)ಯಲ್ಲಿ ರಾಮಲಲ್ಲಾ ಮೆರವಣೆಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೀಗ ಈ ಮೆರವಣಿಗೆಯನ್ನು ದಿಢೀರ್ ಆಗಿ ರದ್ದುಮಾಡಲಾಗಿದೆ.

ಇದನ್ನೂ ಓದಿ: Ayodhya ರಾಮ ಲಲ್ಲಾ ವಿಗ್ರಹದ ಪುರ ಮೆರವಣಿಗೆ ರದ್ದು: ಟ್ರಸ್ಟ್ ಹೇಳಿದ್ದೇನು??

ಹೌದು, ಜನವರಿ 22ರಂದು ನಡೆಯುವ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಮಂದಿರ ಟ್ರಸ್ಟ್, ಜನವರಿ 17ರಂದು ರಾಮಲಲ್ಲಾ ಮೂರ್ತಿಯನ್ನು ಆಯೋಧ್ಯೆ ನಗರಯಲ್ಲಿ ಮೆರವಣಿಗೆ ಮೂಲಕ ರಾಮ ಮಂದಿರಕ್ಕೆ ಕರೆತರಲು ಸಿದ್ಧತೆ ಮಾಡಿತ್ತು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಈ ಮೆರವಣಿಗೆಯನ್ನು ರದ್ದು ಮಾಡಲಾಗಿದೆ.

 

ಅಂದಹಾಗೆ ಈ ಕುರಿತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟೀಕರಣ ನೀಡಿದ್ದು, ಭದ್ರತಾ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದೆ. ಅಲ್ಲದೆ ಮೆರವಣಿಗೆ ಬದಲಿಗೆ ರಾಮ ಜನ್ಮ ಭೂಮಿ ಆವರಣದಲ್ಲಿ ಪ್ರದಕ್ಷಿಣೆಗೆ ಆಯೋಜನೆ ಮಾಡಲಾಗಿದೆ. ಹೊಸ ರಾಮಲಲ್ಲಾ ಮೂರ್ತಿಯನ್ನು ಜನ್ಮಭೂಮಿ ಆವರಣದಲ್ಲೇ ಪ್ರದಕ್ಷಿಣೆ ಹಾಗೂ ಮೆರವಣಿಗೆ ಮೂಲಕ ಸಾಗಿ ರಾಮ ಮಂದಿರಕ್ಕೆ ತರಲಾಗುತ್ತದೆ ಎಂದು ಹೇಳಿದೆ.

 

ಇನ್ನು ಆಯೋಧ್ಯೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು, ರಾಮಮಂದಿರ ಪ್ರಾಣಪ್ರತಿಷ್ಠೆ ಭದ್ರತೆ ಜವಾಬ್ದಾರಿ ವಹಿಸಿಕೊಂಡಿರುವ ಭದ್ರತಾ ಪಡೆಗಳ ಜೊತೆ ರಾಮ ಜನ್ಮಭೂಮಿ ಟ್ರಸ್ಟ್ ಮಹತ್ವದ ಸಭೆ ನಡೆಸಿದ್ದು ಈ ವೇಳೆ ಮೆರವಣಿಗೆ ಸಂದರ್ಭದಲ್ಲಿ ಜನ ಕಿಕ್ಕಿರಿಯುವುದರಿಂದ ಮೆರವಣಿಗೆ ಕ್ಯಾನ್ಸಲ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

Leave A Reply

Your email address will not be published.