House Burglary: ಕೆಲಸಕ್ಕೆ ಸೇರಿದ 1 ದಿನಕ್ಕೆ ಮನೆಗೆ ಕನ್ನ; ಮುಂಬೈ ಗ್ಯಾಂಗ್‌ ಕಳ್ಳಿಯರು ಅರೆಸ್ಟ್‌!!!

Bengaluru: ಮನೆಕೆಲಸಕ್ಕೆ ಸೇರಿ ಚಿನ್ನಾಭರಣ ಕಳವು ಮಾಡಿದ ಚಾಲಾಕಿ ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ವನಿತಾ (38) ಹಾಗೂ ಯಶೋಧ(40) ಬಂಧಿತ ಮಹಿಳೆಯರು.

ಇವರು ದೊಡ್ಡಕನ್ನಹಳ್ಳಿಯ SJR ಪ್ಲಾಜಾ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಶೇಖರ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ. ಕೆಲಸಕ್ಕೆ ಸೇರಿದ ಮರುದಿನವೇ ಲಕ್ಷಾಂತರ ರೂ.ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದ್ದರು.

ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಇಬ್ಬರ ವಿರುದ್ಧ ಈ ಹಿಂದೆ ಮುಂಬೈನ ವಿವಿಧ ಪೊಲೀಸ್‌ ಠಾಣೆಗಳಲ್ಲಿ 36 ಮನೆ ಕಳವು ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ. ಇವರು ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗೆಲಸಕ್ಕೆ ಸೇರಿ ನಂತರ ಚಿನ್ನಾಭರ ದೋಚಿ ಪರಾರಿಯಾಗುತ್ತಿದ್ದರು. ಹಲವು ಬಾರಿ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಗೆ ಬಂದು ಮತ್ತೆ ಅದೇ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: KSRTC Bus: ಶಕ್ತಿ ಯೋಜನೆ ಎಫೆಕ್ಟ್: KSRTC ಪ್ರಯಾಣಿಕರ ಜೇಬಿಗೆ ಕತ್ತರಿ: ಟಿಕೇಟ್ ದರದಲ್ಲಿ ಭಾರೀ ಹೆಚ್ಚಳ!!

ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ನ ಬಳಿ ಸುತ್ತಾಡಿ ಸೆಕ್ಯೂರಿಟಿ ಗಾರ್ಡ್‌ ನ ಪರಿಚಯ ಬೆಳೆಸಿ ನಂತರ ಮನೆ ಕೆಲಸಕ್ಕೆ ಸೇರಿ ಚಿನ್ನಾಭರಣ ದೋಚುತ್ತರೆ. ಇವರಿಬ್ಬರಿಂದ 127 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಬೆಳ್ಳಂದೂರು ಪೊಲೀಸ್‌ ಠಾಣೆಯ ಪೊಲೀಸರು ಇವರನ್ನು ಬಂಧಿಸಿದ್ದಾರೆ.

Leave A Reply

Your email address will not be published.