Job Credit Score: ಬ್ಯಾಂಕ್‌ ಕೆಲಸಕ್ಕೆ ಸೇರಲು ಬಂದಿದೆ ಹೊಸ ರೂಲ್ಸ್‌; ಇನ್ನು ಮುಂದೆ ಕ್ರೆಡಿಟ್‌ ಸ್ಕೋರ್‌ ಬೇಕು!!!

Job Cibil Score: ನೀವು ಇನ್ನೇನಾದರೂ ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿಯಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನು ಮುಂದೆ ಈ ಉದ್ಯೋಗಕ್ಕಾಗಿ, CIBIL ಸ್ಕೋರ್‌ ಅಥವಾ ಕ್ರೆಡಿಟ್‌ ಸ್ಕೋರ್‌ ಕೂಡಾ ಉತ್ತಮವಾಗಿರಬೇಕು. ಬ್ಯಾಂಕಿಂಗ್‌ ವಲಯದ ನೇಮಕಾತಿ ಏಜೆನ್ಸಿಯಾದ IBPS, ಕೆಲಸಕ್ಕೆ ಬೇಕಾದ ಅರ್ಹತೆಗಳಲ್ಲಿ ಉತ್ತಮ ಕ್ರೆಡಿಟ್‌ ಸ್ಕೋರ್‌ ಅನ್ನು ಕೂಡಾ ಸೇರಿಸಿದೆ.

CIBIL ಅಥವಾ ಕ್ರೆಡಿಟ್ ಸ್ಕೋರ್ ಅನ್ನು ದೇಶದಲ್ಲಿ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ನೀಡುತ್ತದೆ. ಇದು ಮೂರು ಅಂಕಿಗಳ ಸ್ಕೋರ್ ಆಗಿದೆ. ಇದು 300 ರಿಂದ 900 ರ ನಡುವೆ ಇರುತ್ತದೆ. ಇದು ಸಾಲವನ್ನು ಮರುಪಾವತಿ ಮಾಡುವ ವ್ಯಕ್ತಿಯ ಸಾಮರ್ಥ್ಯವನ್ನು ಹೇಳುತ್ತದೆ.

IBPS RRB ಮತ್ತು IBPS ಕ್ಲರ್ಕ್ ಮತ್ತು PO ನೇಮಕಾತಿ ಅಧಿಸೂಚನೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಿದೆ. ಇದರಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಎಂದು ಹೇಳಿದೆ.

ಸಡಿಲ ಬಟ್ಟೆ ಧರಿಸಿ ಅಕ್ರಮ ಗರ್ಭ ಮುಚ್ಚಿಟ್ಟ ಯುವತಿ; ಕೊನೆಗೆ ಏನು ಮಾಡಿದಳು ಗೊತ್ತೇ?

ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿರಬೇಕು. IBPS ಮತ್ತು ಇತರ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಪ್ರತಿ ಅಭ್ಯರ್ಥಿಯು ತನ್ನ CIBIL ಸ್ಕೋರ್ ಅನ್ನು ತಿಳಿದಿರಬೇಕು ಎಂದು ಹೇಳಲಾಗುತ್ತದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಐಬಿಪಿಎಸ್ ಅಧ್ಯಕ್ಷ ಎಂವಿ ರಾವ್ ಅವರು ಕಡಿಮೆ ಕ್ರೆಡಿಟ್ ಸ್ಕೋರ್ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

 

Leave A Reply

Your email address will not be published.