Siddaganga shri: ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಹೋಗುವುದಿಲ್ಲ ಎಂದ ಸಿದ್ದಗಂಗಾ ಶ್ರೀ !! ಯಾಕಂತೆ ಗೊತ್ತಾ?
Siddaganga shri: ಬರುವ ಜನವರಿ 22ರಂದು ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅನೇಕ ಗಣ್ಯಮಾನ್ಯರಿಗೆ ಆಮಂತ್ರಣ ನೀಡಲಾಗುತ್ತಿದೆ. ಕೆಲವರು ಆಮಂತ್ರಣಕ್ಕಾಗಿ ಕಾದು ಕೂತಿದ್ದಾರೆ. ಆದರೆ ಈ ನಡುವೆಯೇ ಕರ್ನಾಟಕದ ಖ್ಯಾತ ಮಠಾಧಿಪತಿಗಳಾದ ಸಿದ್ದಗಂಗೆಯ ಶ್ರೀ(Siddaganga Shri) ಸಿದ್ದಲಿಂಗೇಶ್ವರ ಸ್ವಾಮಿಗಳು ತಾನು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದಿದದಾರೆ.
ಅಯೋಧ್ಯೆಯ ರಾಮ ಮಂದೆರ ಉದ್ಘಾಟನೆಗೆ ಆಮಂತ್ರಣ ಬರದಿದ್ದರೂ ಅನೇಕ ಗಣ್ಯರು, ರಾಜಕೀಯ ವ್ಯಕ್ತಿಗಳು ತಾನು ಹೋಗೇ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಆಮಂತ್ರಣ ಸಿಕ್ಕಿದರೂ ಕೂಡ ಸಿದ್ದಗಂಗೆಯ ಶ್ರೀ ಸಿದ್ದಲಿಂಗೇಶ್ವರ ಶ್ರೀಗಳು ನಾನು ರಾಮ ಮಂದಿರದ ಉದ್ಘಾಟನೆಗೆ ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದಾರೆ. ಆದರೆ ಇದಕ್ಕೆ ಒಂದು ಕಾರಣವೂ ಉಂಟು.
ಹೌದು, ರಾಮ ಮಂದಿರ ಉದ್ಘಾಟನೆ ಬಗ್ಗೆ ಮಾತನಾಡಿದ ಶ್ರೀಗಳು ನಮಗೂ ಆಹ್ವಾನ ಬಂದಿದೆ. ಆದರೆ ಲಿಂಗೈಕ್ಯ, ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ (Dr. Shivakumara Swamiji) 5ನೇ ವರ್ಷದ ಪುಣ್ಯ ಸ್ಮರಣೆ ಇರುವ ಕಾರಣ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಾನು ಹೋಗಲು ಆಗುವುದಿಲ್ಲ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: Ira Khan- Nupur Marriage: ಚಡ್ಡಿ ಬನಿಯನ್ ಹಾಕಿಕೊಂಡು ಅಮೀರ್ ಪುತ್ರಿಯನ್ನು ವಿವಾಹವಾದ ನೂಪುರ್!!
ಅಲ್ಲದೆ ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಶ್ರೀ ರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ನಿಂದ ಆಹ್ವಾನ ಬಂದಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಧಿಕೃತವಾಗಿ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಜನವರಿ 20ರಂದು ಬಂದು ಅಯೋಧ್ಯೆಯಲ್ಲಿ ತಂಗುವಂತೆ ಮನವಿ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಜನವರಿ 23 ರಂದೇ ಹಿಂದಿರುಗಲು ಹೇಳಿದ್ದಾರೆ. ಆದರೆ ಪರಮಪೂಜ್ಯರ ಪುಣ್ಯ ಸ್ಮರಣೆಯೆ ನಮಗೆ ಮುಖ್ಯ. ಒಟ್ಟಿನಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದ್ದಾರೆ.