Puttur: ಈಶ್ವರಮಂಗಲದಲ್ಲಿ ಒಂಟಿ ಸಲಗದ ಹಾವಳಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ!!

Share the Article

Puttur: ಪುತ್ತೂರು -(Puttur)ಸುಳ್ಯ-ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವೊಂದು (Lonely Elephant)ಅಡ್ಡಾಡಿ ತೋಟದ್ದ ಮೇಲೆ ದಾಳಿ ನಡೆಸಿದ್ದು (Damage), ಗ್ರಾಮಸ್ಥರಲ್ಲಿ ಆತಂಕ(Worried)ಮೂಡಿಸಿದೆ.

 

ಈಗಾಗಲೇ ಮಂಡೆಕೋಲು, ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದಿದೆ ಎನ್ನಲಾಗಿದೆ. ಈ ನಡುವೆ, ಜ.3ರ ಬುಧವಾರ ಮುಂಜಾನೆ ವೇಳೆಗೆ ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿದ ಸಲಗವೊಂದು ಹತ್ತು ಬಾಳೆ ಗಿಡ ಹಾನಿ ಮಾಡಿದೆ ಎನ್ನಲಾಗಿದೆ. ಇದರ ಜೊತೆಗೆ, ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನು ಸೀಳಿ ಕೊಂಬೆಗಳನ್ನು ಮುರಿದು ತಿಂದಿದೆ ಎಂದು ತಿಳಿದುಬಂದಿದ್ದು, ಸದ್ಯ, ಸಲಗದ ಪಯಣ ಮುಗೇರಿನ ಕಡೆಗೆ ಸಾಗಿದೆ ಎನ್ನಲಾಗಿದೆ.

 

ಒಂಟಿ ಸಲಗ ಇನ್ನಷ್ಟು ಕೃಷಿ ಹಾನಿಗೊಳಿಸುವ ಸಾಧ್ಯತೆ ಇದ್ದು, ಕೃಷಿಕರು ರಾತ್ರಿ ತೋಟಕ್ಕೆ ಹೋಗದಂತೆ ಜಾಗ್ರತೆ ವಹಿಸಬೇಕು ಎಂದು ಅರಣ್ಯ ಇಲಾಖೆಯವರು ಸಲಹೆ ನೀಡಿದ್ದಾರೆ. ಈ ನಡುವೆ,ಒಂಟಿ ಸಲಗ ಪದೇ ಪದೇ ಜನನಿಬಿಡ ಪ್ರದೇಶಗಳಿಗೆ ದಾಳಿ ಮಾಡುತ್ತಿರುವ ಹಿನ್ನೆಲೆ ಸುತ್ತಮುತ್ತಲಿನ ಗ್ರಾಮಸ್ಥರು ಭಯದಲ್ಲೆ ದಿನದೂಡುವ ಪರಿಸ್ಥಿತಿ ಎದುರಾಗಿದೆ.

Leave A Reply