Drinking Water: ದಿನಕ್ಕೆ ಮಹಿಳೆಯರು ಎಷ್ಟು ನೀರು ಕುಡಿಯಬೇಕು ಗೊತ್ತಾ?

Drinking Water: ಆರೋಗ್ಯವನ್ನು ಕಾಪಾಡಿಕೊಳ್ಳಲು(Healthy Lifestyle) ಎಲ್ಲರೂ ಒಂದಲ್ಲ ಒಂದು ಹರಸಾಹಸ ಪಡುವುದು ಸಹಜ. ಉತ್ತಮ ಆರೋಗ್ಯಕ್ಕೆ(Good Health)ನೀರು(Water)ಅತ್ಯಗತ್ಯ ಅಂಶವಾಗಿದೆ. ಬಾಯಾರಿಕೆಯಾದ ಸಂದರ್ಭ ನೀರು ಕುಡಿಯುವುದು ಬಹಳ ಸಹಜವಾಗಿದೆ. ಆದರೆ ವಯಸ್ಕರು ಎಷ್ಟು ಲೋಟ ನೀರು ಕುಡಿಯಬೇಕು(Drinking Water)ಎಂದು ನಿಮಗೆ ತಿಳಿದಿದೆಯೇ?ದೇಹವು ಮೂತ್ರ ಮತ್ತು ಬೆವರಿನ ಮುಖಾಂತರ ನಿರಂತರವಾಗಿ ನೀರನ್ನು ಹೊರಹಾಕುತ್ತದೆ.

ಅನೇಕ ಆರೋಗ್ಯ ತಜ್ಞರ ಮಾಹಿತಿ ಅನುಸಾರ, ಚಯಾಪಚಯ, ತೂಕ, ಎತ್ತರ ಮತ್ತು ಚರ್ಮಕ್ಕಾಗಿ ದಿನಕ್ಕೆ 6 ರಿಂದ 7 ಲೋಟ ನೀರು ಕುಡಿಯಲು ಸೂಚಿಸುತ್ತಾರೆ. ನೀರನ್ನು ಹೆಚ್ಚೆಚ್ಚು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಬ್ರಿಟಿಷ್ ಆರೋಗ್ಯ ಸಚಿವಾಲಯದ ವೆಬ್ಸೈಟ್ ಮಾಹಿತಿ ಪ್ರಕಾರ, ದಿನಕ್ಕೆ 6 ರಿಂದ 8 ಲೋಟ ನೀರು ಕುಡಿಯಲು ಶಿಫಾರಸು ಮಾಡಲಾಗಿದೆ. ಇದಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗದು.

ಇದನ್ನು ಓದಿ: Belagavi: ಒಬ್ಬಳು ಹುಡುಗಿಗಾಗಿ ಎರಡು ತಂಡಗಳ ನಡುವೆ ಭಾರೀ ಘರ್ಷಣೆ – ನಂತರ ಏನಾಯ್ತು?!

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಶಿಫಾರಸು ಮಾಡಿದ ಮಾಹಿತಿ ಅನುಸಾರ, ‘ಮಹಿಳೆಯರು ದಿನಕ್ಕೆ 2.7 ಲೀಟರ್ ಮತ್ತು ಪುರುಷರಿಗೆ 3.7 ಲೀಟರ್ ಕುಡಿಯುತ್ತಾರಂತೆ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಯಾವುದೇ ಆಹಾರವನ್ನು ಸೇವಿಸಿದ ತಕ್ಷಣ ಇಲ್ಲವೇ ತಕ್ಷಣ ನೀರು ಕುಡಿಯುವುದು ತುಂಬಾ ಅಪಾಯಕಾರಿ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗಬಹುದು. ಹೆಚ್ಚು ನೀರು ಕುಡಿಯುವ ಅಭ್ಯಾಸದಿಂದ ಎದೆಯುರಿ, ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಹೆಚ್ಚು ನೀರು ಕುಡಿಯುವ ಅಭ್ಯಾಸದಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು.

Leave A Reply

Your email address will not be published.