Home Business Online Shopping: ಒಂದೇ ವರ್ಷಕ್ಕೆ ಬರೋಬ್ಬರಿ 9940 ಕಾಂಡೋಮ್ ಆರ್ಡರ್ ಮಾಡಿದ ಗ್ರಾಹಕ!!

Online Shopping: ಒಂದೇ ವರ್ಷಕ್ಕೆ ಬರೋಬ್ಬರಿ 9940 ಕಾಂಡೋಮ್ ಆರ್ಡರ್ ಮಾಡಿದ ಗ್ರಾಹಕ!!

Hindu neighbor gifts plot of land

Hindu neighbour gifts land to Muslim journalist

Online Shopping: ಇಂದಿನ ಬ್ಯುಸಿ ಜಗತ್ತಿನಲ್ಲಿ ಆನ್ಲೈನ್(Online Food)ಫುಡ್, ಆನ್ಲೈನ್ ಶಾಪಿಂಗ್ (Online Shopping)ಎಂದು ಅಂಗಡಿಗಳಿಗೆ ಅಲೆದಾಡುವ ಬದಲಿಗೆ ಆನ್ಲೈನ್ ಮೂಲಕ ನಮಗೇ ಬೇಕಾದ್ದನ್ನು ಕೊಂಡುಕೊಳ್ಳುವ ಅಭ್ಯಾಸ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ನಗರ ಪ್ರದೇಶಗಳಲ್ಲಿ ಯಾವುದೇ ವಸ್ತು ಬೇಕಾದರೂ ಆನ್‌ಲೈನ್‌ ಮಾರಾಟ ತಾಣಗಳಿಗೆ ಮುಗಿಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು ತಪ್ಪಾಗದು.

ಬ್ಲಿಂಕಿಟ್ 2023ರ ತನ್ನ ವೇದಿಕೆಯ ಟ್ರೆಂಡ್‌ಗಳು ಹಾಗೂ ಕುತೂಹಲಕಾರಿ ಖರೀದಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿ ಅನುಸಾರ, ಒಬ್ಬ ಗ್ರಾಹಕ ತಿಂಗಳಿಗೆ 38 ಒಳ ಉಡುಪುಗಳನ್ನು ಆರ್ಡರ್ ಮಾಡಿದ್ದು, ಅಂದರೆ, ದಿನಕ್ಕೆ ಒಂದಕ್ಕಿಂತ ಹೆಚ್ಚು ಬಟ್ಟೆಗಳನ್ನು ಖರೀದಿ ಮಾಡಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಗ್ರಾಹಕರೊಬ್ಬರು ಆನ್‌ಲೈನ್ ಡೆಲಿವರಿ ತಾಣ ಬ್ಲಿಂಕಿಟ್‌ನಲ್ಲಿ ಕಳೆದ ವರ್ಷ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾರಂತೆ. ಹಾಗೆಂದರೆ, ಪ್ರತಿ ಗಂಟೆಗೆ 1ಕ್ಕೂ ಹೆಚ್ಚು ಅದೇ ರೀತಿ ಒಂದು ದಿನಕ್ಕೆ ಸರಿ ಸುಮಾರು 27 ಕಾಂಡೊಮ್ ಆರ್ಡರ್ ಮಾಡಿದ್ದಾರಂತೆ.

Punjab Police Death: ಅರ್ಜುನ ಪ್ರಶಸ್ತಿ ವಿಜೇತ ಹಿರಿಯ ಪೊಲೀಸ್‌ ಅಧಿಕಾರಿಯ ಶವ ಕಾಲುವೆಯಲ್ಲಿ ಪತ್ತೆ!!

ಬ್ಲಿಂಕಿಟ್ ಅಪ್ಲಿಕೇಶನ್ ಮಧ್ಯರಾತ್ರಿಯ ಬಳಿಕ 3.20 ಲಕ್ಷಕ್ಕೂ ಹೆಚ್ಚು ಮ್ಯಾಗಿ ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಿದೆಯಂತೆ. 2023ರಲ್ಲಿ ಗ್ರಾಹಕರೊಬ್ಬರು ಬರೋಬ್ಬರಿ 4,832 ಸ್ನಾನದ ಸಾಬೂನುಗಳನ್ನು ಖರೀದಿ ಮಾಡಿದ್ದಾರಂತೆ. ಹಾಗೆಂದರೆ ದಿನಕ್ಕೆ ಸರಿ ಸುಮಾರು 13 ಸೋಪು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಆ ಗ್ರಾಹಕ ಪ್ರತಿ ಎರಡು ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಒಂದು ಸೋಪ್ ಮುಗಿಸುತ್ತಿದ್ದರಂತೆ. ಹೈದರಾಬಾದ್‌ನ ಗ್ರಾಹಕರೊಬ್ಬರು 17,000 ಕೆ.ಜಿ ಅಕ್ಕಿ ಆರ್ಡ‌ರ್ ಮಾಡಿದ್ದು, ಮತ್ತೊಬ್ಬ ಗ್ರಾಹಕರು 183 ವಿಭಿನ್ನ ಶೇಡ್‌ನ ಲಿಪ್‌ಸ್ಟಿಕ್ಸ್ ಖರೀದಿ ಮಾಡಿದ್ದಾರೆ. ಮತ್ತೊಬ್ಬ ಗ್ರಾಹಕ ವರ್ಷದಲ್ಲಿ 2,670 ಟೂತ್ ಬ್ರಷ್ ಖರೀದಿ ಮಾಡಿದ್ದು, ಅಂದರೆ ದಿನಕ್ಕೆ 7 ಟೂತ್ ಬ್ರಷ್ ಖರೀದಿ ಮಾಡಿದ ಹಾಗಾಯಿತು.