PM Kisan Scheme: ಕೇಂದ್ರದಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್: ರೈತರ ಖಾತೆಗೆ ಅತೀ ಶೀಘ್ರದಲ್ಲೇ 8 ಸಾವಿರ ರೂಪಾಯಿ ಜಮೆ !?
PM Kisan Scheme: ಕೇಂದ್ರ ಸರ್ಕಾರ ಹೊಸ ವರ್ಷದ ಹೊಸ್ತಿಲಲ್ಲಿ ರೈತರಿಗೆ(Farmers)ಗುಡ್ ನ್ಯೂಸ್ ನೀಡಲು ಮುಂದಾಗಿದೆ ಎನ್ನಲಾಗಿದೆ. ಮೋದಿ ಸರ್ಕಾರ ಈ ವರ್ಷ ಮಂಡಿಸಲಿರುವ ಬಜೆಟ್( Budget 2024)ರೈತರಿಗೆ ಸಿಹಿಸುದ್ದಿ ನೀಡಬಹುದು ಎನ್ನಲಾಗುತ್ತಿದೆ. ಈ ಮೂಲಕ ಪಿಎಂ ಕಿಸಾನ್ ಹಣ (PM Kisan)ಹೆಚ್ಚಿಸುವ ನಿರೀಕ್ಷೆಯಿದೆ. ಈ ವರ್ಷದ ನಿರ್ಮಲಾ ಸೀತಾರಾಮನ್ ಅವರ ಬಜೆಟ್ನಲ್ಲಿ ಪಿಎಂ ಕಿಸಾನ್ ಹಣವನ್ನು(PM Kisan Scheme) ಮತ್ತೊಂದು ಕಂತು ನೀಡಬಹುದು ಎಂದು ವರದಿಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಯುಪಿಐ ಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ !ನಿಯಮಗಳ ಬಗ್ಗೆ ಈಗಲೇ ತಿಳಿದುಕೊಳ್ಳಿ!!
ಪಿಎಂ ಕಿಸಾನ್ ಯೋಜನೆ ಇನ್ನೂ ರೂ. 2 ಸಾವಿರ ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯ ಮೂರು ಕಂತುಗಳಲ್ಲಿ ಹಣ ಬರುತ್ತಿದೆ. ಇದುವರೆಗೆ ವರ್ಷಕ್ಕೆ ಒಟ್ಟು ರೂ. 6 ಸಾವಿರ ಬರುತ್ತಿತ್ತು. ಆದರೆ ಇನ್ಮು ಮುಂದೆ ಮತ್ತೊಂದು ಕಂತು ನೀಡುವ ಜೊತೆಗೆ 8 ಸಾವಿರದವರೆಗೆ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.ಇದುವರೆಗೆ ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗೆ 15 ಕಂತುಗಳ ಹಣವನ್ನು ಜಮಾ ಮಾಡಿದ್ದು, ಒಟ್ಟಾಗಿ 30 ಸಾವಿರ ರೈತರಿಗೆ ತಲುಪಿದೆ ಎನ್ನಬಹುದು. ಮುಂದಿನ ದಿನಗಳಲ್ಲಿ 16ನೇ ಕಂತಿನ ಹಣ ಬರಲಿದೆ ಎನ್ನಲಾಗಿದ್ದು, ಹೀಗಾದರೆ ರೈತರಿಗೆ ಒಟ್ಟು 32 ಸಾವಿರ ಸಿಗಲಿದೆ.
ಇದನ್ನು ಓದಿ: Beauty tips: ದಿನವೂ ಇದನ್ನು ಕುಡಿದರೆ ಲೈಫ್ ಲಾಂಗ್ ಪಿಂಪಲ್ ಬರೋದಿಲ್ಲ !!
ರೈತರು ಪಿಎಂ ಕಿಸಾನ್ ಯೋಜನೆಗೆ ಸೇರಲು ಮೊದಲಿಗೆ ಪಿಎಂ ಕಿಸಾನ್ ಸೈಟ್ಗೆ ಹೋಗಿ ನೇರವಾಗಿ ಸೇರಿಕೊಳ್ಳಬಹುದಾಗಿದೆ. ಪಡಿತರ ಚೀಟಿ, ಆಧಾರ್ ಕಾರ್ಡ್, ಜಮೀನಿನ ಪಟ್ಟಾ ಪಾಸ್ ಬುಕ್, ಬ್ಯಾಂಕ್ ಖಾತೆ ಸಂಖ್ಯೆ ವಿವರಗಳು ಬೇಕಾಗುತ್ತವೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಜೊತೆ ಮೊಬೈಲ್ ಲಿಂಕ್ ಮಾಡಬೇಕು. ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ 2024 ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ನಲ್ಲಿ ಪಿಎಂ ಕಿಸಾನ್ ನಿಧಿಯನ್ನು ಹೆಚ್ಚಿಸುವ ಪ್ರಸ್ತಾಪ ಬರುವ ಸಾಧ್ಯತೆ ಬಗ್ಗೆ ವರದಿಗಳು ಮಾಹಿತಿ ನೀಡಿವೆ. ಇದರ ನಡುವೆ, ಲೋಕಸಭಾ ಚುನಾವಣೆ ಕೂಡ ನಡೆಯಲಿರುವ ಹಿನ್ನೆಲೆ ಕೇಂದ್ರ ಬಜೆಟ್ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆಗಳಿವೆ.ಆದಾಗ್ಯೂ, ಪಿಎಂ ಕಿಸಾನ್ ಹಣ ಹೆಚ್ಚುವ ಕುರಿತು ಸ್ಪಷ್ಟ ಉತ್ತರ ಸಿಗಲು ಇನ್ನೆರಡು ತಿಂಗಳು ಕಾಯಬೇಕಾಗಿದೆ.