Home Karnataka State Politics Updates CM Siddaramaiah: ಡಿಕೆಶಿ ‘ಅದರಲ್ಲಿ’ ನನಗಿಂತಲೂ ಎತ್ತಿದ ಕೈ !! ಹೀಗ್ಯಾಕಂದ್ರು ಸಿದ್ದರಾಮಯ್ಯ?

CM Siddaramaiah: ಡಿಕೆಶಿ ‘ಅದರಲ್ಲಿ’ ನನಗಿಂತಲೂ ಎತ್ತಿದ ಕೈ !! ಹೀಗ್ಯಾಕಂದ್ರು ಸಿದ್ದರಾಮಯ್ಯ?

CM Siddaramaiah

Hindu neighbor gifts plot of land

Hindu neighbour gifts land to Muslim journalist

CM Siddaramaiah: ಡಿಕೆ ಶಿವಕುಮಾರ್ ವಯಸ್ಸಲ್ಲಿ ನನಗಿಂತಲೂ ಸಣ್ಣವನಾದರೂ ಸಂಘಟನೆ ವಿಚಾರದಲ್ಲಿ, ಸಂಘಟನಾ ಚತುರತೆಯಲ್ಲಿ ನನಗಿಂತಲೂ ಎತ್ತಿದ ಕೈ ಎಂದು ಸಿಎಂ ಸಿದ್ದರಾಮಯ್ಯ(CM Siddaramaiah)ಅವರು ಹೇಳಿದ್ದಾರೆ.

ಹೌದು, ನಿನ್ನೆ ದಿನ (ಡಿ.31)ಭಾನುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನ 2023ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ ಮತ್ತು ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಡಿಕೆಶಿ(DK Shivkumar)ಅವರನ್ನು ಹಾಡಿ ಕೊಂಡಾಡಿದರು.

ಇದನ್ನು ಓದಿ: Double Crown: ತಲೆಯಲ್ಲಿ ಎರಡೂ ಸುರುಳಿಯಿದ್ದರೆ ಏನರ್ಥ ಗೊತ್ತಾ??

ಈ ವೇಳೆ ಮಾತನಾಡಿದ ಅವರು . ಕೆ. ಶಿವಕುಮಾರ್ ಕ್ರಿಯಾಶೀಲ ವ್ಯಕ್ತಿ. ನನಗಿಂತಲೂ ಉತ್ತಮ ಸಂಘಟಕ. ನಾನು ಶಿವಕುಮಾರ್‌ಗಿಂತಲೂ ಮೊದಲು ರಾಜಕಾರಣಕ್ಕೆ ಬಂದು ಜೆಡಿಎಸ್‌ನ ರಾಜ್ಯಾಧ್ಯಕ್ಷನಾಗಿದ್ದೆ. ವಯಸ್ಸಿನಲ್ಲಿ ಆತ ನನಗಿಂತಲೂ ಚಿಕ್ಕವನು ಆದರೆ ಸಂಘಟನೆಯಲ್ಲಿ ಶಿವಕುಮಾರ್ ಹೆಚ್ಚು ಸಮರ್ಥರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.