Home latest 9ನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆಯಲು ಮಾರಕಾಸ್ತ್ರ ಸಮೇತ ಬಂದ 7 ನೇ ತರಗತಿ ವಿದ್ಯಾರ್ಥಿ; ಬೆಚ್ಚಿಬಿದ್ದ...

9ನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆಯಲು ಮಾರಕಾಸ್ತ್ರ ಸಮೇತ ಬಂದ 7 ನೇ ತರಗತಿ ವಿದ್ಯಾರ್ಥಿ; ಬೆಚ್ಚಿಬಿದ್ದ ಜನತೆ!!

Hindu neighbor gifts plot of land

Hindu neighbour gifts land to Muslim journalist

Raichur News: ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಒಂದು ಘಟನೆ ನಡೆದಿದೆ. ಏಳನೇ ತರಗತಿಯ ವಿದ್ಯಾರ್ಥಿಗಳ ತಂಡವೊಂದು ಒಂಭತ್ತನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಹೊಡೆಯಲು ಬಂದಿದ್ದು, ಈ ಸಂದರ್ಭದಲ್ಲಿ ಸೇರಿದ ಜನರಿಂದ ಹೆದರಿ ಓಡಿ ಹೋಗಿರುವ ಘಟನೆ ನಡೆದಿದೆ.

ರಾಯಚೂರಿನ ಜ್ಯೋತಿಕಾಲೋನಿಯಲ್ಲಿ ಅಪ್ರಾಪ್ತ ಹುಡುಗರು ಹೊಡೆದಾಡಿಕೊಂಡಿದ್ದಾರೆ. 9 ನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲು ಏಳನೇ ತರಗತಿಯ ವಿದ್ಯಾರ್ಥಿ ಹಾಗೂ ತನ್ನ ಏರಿಯಾದ ಹುಡುಗರನ್ನು ಕರೆದುಕೊಂಡು ಬಂದಿದ್ದು, ಜೊತೆಯಲ್ಲಿ ಮಾರಕಾಸ್ತ್ರಗಳನ್ನು ತಗೊಂಡು ಬಂದಿದ್ದಾರೆ. ನಂತರ ಒಂಭತ್ತನೇ ಹುಡುಗರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಬರ್ತಿದ್ದಂತೆ ಮಾರಕಾಸ್ತ್ರವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ರಾಯಚೂರು ನಗರದ ಖಾಸಗಿ ಸ್ಕೂಲ್‌ನಲ್ಲಿ ಓದುತ್ತಿದ್ದ ಇವರು, ಇವರ ಮಧ್ಯೆ ಏನೋ ಕಿರಿಕ್‌ ಗಳಾಗಿತ್ತು. ಹೀಗಾಗಿ ಏಳನೇ ತರಗತಿ ವಿದ್ಯಾರ್ಥಿ ತನ್ನ ಏರಿಯಾದ ಹುಡುಗರನ್ನು ಕರೆದುಕೊಂಡು ಬಂದು ನಾಲ್ಕು ಜನ ಸೇರಿ ಒಂಭತ್ತನೇ ಹುಡುಗರ ಮೇಲೆ ಹಲ್ಲೆ ಮಾಡುತ್ತಾರೆ. ಹಲ್ಲೆ ನಡೆಸಲು ಡ್ಯಾಗರ್‌, ಚಾಕು, ಏರ್‌ಗನ್‌ ತೆಗೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: Suicide: ಹೊಸವರ್ಷದಂದೇ ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ!!!

ರಾಯಚೂರಿನಲ್ಲಿ ಇಂತಹ ಪ್ರಕರಣ ಇದೇ ಮೊದಲು ಪ್ರಕರಣವಾಗಿತ್ತು. ಚಾಕು, ಡ್ರ್ಯಾಗರ್‌ ಪತ್ತೆಯಾಗಿದ್ದು ನೋಡಿದರೆ ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌ ಕುರಿತು ಮಾಹಿತ ಪತ್ತೆ ಮಾಡಲಾಗುತ್ತಿದೆ. ಒಂಭತ್ತನೇ ತರಗತಿ ಹುಡುಗನಿಗೆ ಕೈಗೆ ಏಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ವಿದ್ಯಾರ್ಥಿಗಳ ಮನಸ್ಥಿತಿಗೆ ಸಾರ್ವಜನಿಕರು ಪೋಷಕರು ಕಂಗಾಲಾಗಿದ್ದಾರೆ.