Section 144: ಈ ಏರಿಯಾಗಳಲ್ಲಿ ಸೆ.144 ಸೆಕ್ಷನ್‌ ಜಾರಿ!!! ಯಾಕಾಗಿ? ಇಲ್ಲಿದೆ ಉತ್ತರ!!!

Share the Article

Mall Of Asia: ಮಾಲ್‌ ಆಫ್‌ ಏಷ್ಯಾ ಕ್ಲೋಸ್‌ ಮಾಡಿ ಆದೇಶ ಹೊರಡಿಸಿದ ಕುರಿತು ವರದಿಯಾಗಿದೆ. ನಗರ ಪೊಲೀಸ್‌ ಕಮಿಷನರ್‌ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಜನವರಿ 15 ರವರೆಗೆ ಮಾಲ್‌ ಆಫ್‌ ಏಷ್ಯಾ ಬಂದ್‌ ಆಗಲಿದೆ. ಹಾಗಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಾಲ್‌ ವ್ಯಾಪ್ತಿಯಲ್ಲಿ 144 ಹಾಕಲಾಗಿದೆ. ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.

ಶೇ.60 ರಷ್ಟು ಕನ್ನಡ ಬಳಕೆ ಮಾಡಿಲ್ಲ ಎಂದು ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಮಾಲ್‌ ಮೇಲೆ ದಾಳಿ ನಡೆಸಿ ಪ್ರತಿಭಟನೆ ಮಾಡಿತ್ತು. ಮಾಲ್‌ಗೆ ನುಗ್ಗಿ ಕರವೇ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದರು. ಹಾಗಾಗಿ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಡಿ.31ರಿಂದ ಜನವರಿ 15 ರವರೆಗೆ ಮಾಲ್‌ ಆಫ್‌ ಏಷ್ಯಾ ಬಂದ್‌ ಮಾಡಲಾಗಿದೆ. ಬೆಂಗಳೂರಿನ ಯಲಹಂಕ (Yelhanka, Bengaluru) ಹೋಬಳಿಯ ಬ್ಯಾಟರಾಯನಪುರದ ಬಳ್ಳಾರಿ ರಸ್ತೆಯ ಭಾಗದಲ್ಲಿ ಮಾಲ್ ಆಫ್ ಏಷ್ಯಾ ಇದೆ.

 

 

Leave A Reply