BMTC Employees: ಹೊಸ ವರ್ಷಕ್ಕೆ BMTC ನೌಕರರಿಗೆ ಭರ್ಜರಿ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ !!
BMTC Employees: ಹೊಸ ವರ್ಷದ ಹೊಸ್ತಿಲಲ್ಲಿ ಕಾಲಿಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ(BMTC Employees) ಸಿಹಿ ಸುದ್ದಿಯನ್ನು(Good News)ನೀಡಿದೆ. BMTC ನಿಗಮದಲ್ಲಿ ಸಿಬ್ಬಂದಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಕೈ ಬಿಡುವ ಮೂಲಕ ಬಿಎಂಟಿಸಿ ಸಿಬ್ಬಂದಿಗಳಿಗೆ( BMTC Employees)ಹೊಸ ವರ್ಷದ ಉಡುಗೊರೆಯನ್ನು ಬಿಎಂಟಿಸಿ ಎಂಡಿ ಸತ್ಯವತಿ ನೀಡಿದ್ದಾರೆ.
ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಸಮವಸ್ತ್ರ ಧರಿಸದೆ ಇರುವುದು, ಬಸ್ ಚಾಲನೆ ಸಂದರ್ಭ ಮೊಬೈಲ್ ಬಳಕೆ, ನೋ ಪಾರ್ಕಿಂಗ್ನಲ್ಲಿ ನಿಲುಗಡೆ ಸೇರಿದಂತೆ ಹಲವು ಪ್ರಕರಣಗಳನ್ನೂ ಖುಲಾಸೆಗೊಳಿಸಲಾಗಿದೆ. BMTC ನಿಗಮದಲ್ಲಿ ಸಿಬ್ಬಂದಿ ಮೇಲೆ ದಾಖಲಾಗಿರುವ ಲಘು ಮತ್ತು ಏಕರೂಪದ ಶಿಕ್ಷೆಯನ್ನು ಒಟ್ಟು 6,960 ಪ್ರಕರಣಗಳನ್ನು ಖುಲಾಸೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Meena about her Second Marriage: ನನಗೆ ಸುಖಕ್ಕಿಂತ ಅದೇ ಮುಖ್ಯ’ ಎರಡನೇ ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಮೀನಾ
ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ದಾಖಲಾಗಿರುವ 26 ಗೈರು ಹಾಜರಿ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳನ್ನು ಖುಲಾಸೆ ಮಾಡಲಾಗಿದೆ. ಈ ಪ್ರಕರಣಗಳ ಜೊತೆಯಲ್ಲಿ ವಿವಿಧ ಡಿಪೋಗಳಲ್ಲಿ ದಾಖಲಾಗಿರುವ ರಿವೋಕ್, ಸಸ್ಪೆಂಡ್, 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳನ್ನು ಸಹ ಕೈ ಬಿಡಲಾಗಿದೆ ಎಂದು ವರದಿಯಾಗಿದೆ. ಬಸ್ ಗಳ ಸಮರ್ಪಕ ನಿರ್ವಹಣೆ, ಮಾನವ ಸಂಪನ್ಮೂಲ, ಸಿಬ್ಬಂದಿಯ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಒಟ್ಟು 6,960 ಪ್ರಕರಣಗಳನ್ನು ಖುಲಾಸೆ ಮಾಡಲಾಗಿದೆ.